ಬಾಗಲಕೋಟೆ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಹಾಗೂ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕನ್ನು ಬೆಸುಗೆ ಮಾಡುವಲ್ಲಿ ಮಹತ್ತರ ಯೋಜನೆ ಮಹಿಷವಾಡ ಸೇತುವೆ. ರಬಕವಿ-ಬನಹಟ್ಟಿ ಜಾಕವೆಲ್ನ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಮಹಿಷವಾಡಗಿ ಸೇತುವೆ ಕಾಮಗಾರಿ ಪ್ರಾರಂಭವಾಗಿ ಬರೋಬ್ಬರಿ 7 ವರ್ಷಗಳೇ ಗತಿಸಿದೆ. ಇದರ ಮಧ್ಯ ಮೂರಾಲ್ಕು ಬಾರಿ ಕಾಮಗಾರಿ ಸ್ಥಗಿತಗೊಂಡು ಇದೀಗ ಬೇಸಿಗೆ ಬಂದಾಗ ಮಾತ್ರ ಒಂದೆರಡು ತಿಂಗಳು ಕೆಲಸ ಪ್ರಾರಂಭವಾಗಿ ಮತ್ತೇ ನೇಪಥ್ಯಕ್ಕೆ ಸರಿಯುವ ಕಾರ್ಯ ಸಾಮಾನ್ಯವಾಗಿದೆ.
2018 ರಲ್ಲಿ ಅಂದಿನ ಸಚಿವೆ ಉಮಾಶ್ರೀಯವರು 30 ಕೋಟಿ ರೂ.ಗಳಷ್ಟು ಟೆಂಡರ್ ಕಾಮಗಾರಿ ಮೂಲಕ ನಾಗಾರ್ಜುನ ಕನಸ್ಪನ್ಸ್ ಕಂಪನಿಗೆ ನೀಡಿತ್ತು. ಇದಕ್ಕೆ ಪೂರಕವಾಗಿ 2021 ರಲ್ಲಿ ಕಾಮಗಾರಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಹಾಲಿ ಶಾಸಕ ಸಿದ್ದು ಸವದಿಯವರು ಸೇತುವೆ ವಿಸ್ತರಣೆ ಹೆಚ್ಚಿಸಲು ಟೆಂಡರ್ ಕಾಮಗಾರಿಯನ್ನು 40 ಕೋಟಿ ರೂ.ಗಳವರೆಗೆ ಹೆಚ್ಚಳಗೊಳಿಸುವ ಮೂಲಕ ಕಾಮಗಾರಿ ಮತ್ತಷ್ಟು ವೇಗ ಹಾಗು ವಿಸ್ತರಣೆಯಾಗಲೆಂದು ಸರ್ಕಾರದಿಂದ ಅನುಮೋದನೆ ಮಾಡಿಸಿದರು. ಆದರೆ ನಾಗಾರ್ಜುನ್ ಕನಸ್ಟ್ರಕ್ಷನ ಕಂಪನಿ ತಾನು ನೇರವಾಗಿ ಕೆಲಸ ಮಾಡದೆ ಸಹ ಗುತ್ತಿಗೆ ಕಂಪನಿಯಾದ ತೇಜಸ್ ಸೂಪರ್ಸ್ಟ್ರಕ್ಚರ್ ಕಂಪನಿಗೆ ಕೆಲಸ ಮಾಡಲು ಅನುಮತಿ ಕೊಟ್ಟಿತ್ತು. ಕೆಲಸ ಪಡೆದ ಸಹ ಗುತ್ತಿಗೆ ಕಂಪನಿ 4 ವರ್ಷಗಳ ಕಾಲ ಕೆಲಸ ಮಾಡಿ ತಮ್ಮ ಸಾಮಾನುಗಳನ್ನು ತೆಗೆದುಕೊಂಡು ಇಲ್ಲಿಂದ ಪರಾರಿಯಾಗಿ ಹೋಯಿತು. ತದ ನಂತರ ಕಾಮಗಾರಿ ಸ್ತಗಿತ್ತಗೊಂಡಿರು ಸಹ ನಾಗಾರ್ಜುನ್ ಕಂಪನಿ ತಾನೇ ಕೆಲಸ ಮಾಡದೆ ಮತ್ತೊಂದು ಸಹ ಕಂಪನಿಯಾದ ಸೂಜಿ ಇನ್ಫ್ರ ಕಂಪನಿಗೆ ಕೆಲಸ ಕೊಟ್ಟಿತ್ತು. ಈ ಕಂಪನಿಯು ಯಾವದೇ ಮಶಿನರಿ ಗಳನ್ನು ಜಾಸ್ತಿ ತರದೇ ಕೇವಲ ತೋರಿಕೆಗಷ್ಟೇ ಕೆಲಸ ಮಾಡಿ ತುಂಬಾ ವಿಳಂಬ ಮಾಡತ ಹೋಯಿತ್ತು . ಆಗಲೂ ಸಹ ಯಾದವೇ ಸರಕಾರ ಕಣ್ಣು ತೆರದು ಕಾಮಗಾರಿಗೆ ವೇಗ ಕೊಡಲಿಲ್ಲ.
ಸಹ ಗುತ್ತಿಗೆಯನ್ನು ಪಡೆದಿರುವ ಕಂಪನಿಯು ಕಾಮಗಾರಿಯು ತೀವ್ರ ನಿರ್ಲಕ್ಷ್ಯದಿಂದ ನಡೆಸುವಲ್ಲಿ ಕಾರಣವಾಗಿ ಕೇವಲ ವರ್ಷದ ಎರಡು ತಿಂಗಳಷ್ಟು ಕಾರ್ಯ ಪ್ರಾರಂಭಿಸುತ್ತದೆ. ವರ್ಷಪೂರ್ತಿ ಇದೆ ತರಹ ಕೆಲಸ ಮಾಡಿ ಇಂದಿಗೆ 6 ವರ್ಷ ಗತಿಸಿತ್ತು. ಆದರೆ ಇವತ್ತಿಗೆ ಕೆಲಸ ಕೇವಲ ಅರ್ಧದಷ್ಟು ಪೂರ್ಣವಾಗಿಲ್ಲ. ಇದರಿಂದ ಬೇಸತ್ತ ರಬಕವಿ-ಬನಹಟ್ಟಿ ತಾಲೂಕಿನ ಜನತೆ ಹೋರಾಟಕ್ಕಿಳಿಯಬೇಕಾದ ಅನಿವಾರ್ಯತೆಯಿದೆ ಎಂದು ಎಚ್ಚರಿಕೆ ಕೊಟ್ಟಿದಾರೆ.
ರೈತರ ಭೂಮಿಗೆ ಪರಿಹಾರವಿಲ್ಲ:
ಸೇತುವೆ ನಿರ್ಮಾಣಕ್ಕಾಗಿ ಸುಮಾರು ನಾಲ್ಕೈದು ಎಕರೆಯಷ್ಟು ಭೂಮಿಯನ್ನು ವತಪಡಿಸಿಕೊಳ್ಳಲು ರೈತರನ್ನು ಒಪ್ಪಿಸಿ ಅವರಿಗೆ ನೇರ ಖರೀದಿ ಮುಖಾಂತರ ಜಾಸ್ತಿ ಪರಿಹಾರ ಕೊಡದೆ ಕೇವಲ ಕಾಲ ಹರನ ಮಾಡಿ ಸರ್ಕಾರದಿಂದ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ. ಇದರಿಂದ ರೈತರು ಒಪ್ಪದೆ ಇರುವಾಗ ಮತ್ತೆ ಭೂ ಸ್ವಾದೀನಗೆ ಮುಂದಾಯಿತ್ತು. ಇದರಿಂದ ರೈತರ ಜಮೀನುಗಳು ಭೂ ಸ್ವಾಧೀನ ವಾಗುವರೆಗೂ ಜಮೀನದಲ್ಲಿ ಕೆಲಸ ಮಾಡದೆ ಕೇವಲ ನೋಡಿಕೊಂಡು ಕುಳಿತುಕೊಳ್ಳುವ ಪ್ರಸಂಗ ಬಂದಿದೆ.
ಟೆಂಡರ್ ಕಾರ್ಯದಲ್ಲಿ ವೈಫಲ್ಯ:
ಸೇತುವೆ ಕೆಲಸ ಮಾಡುವ ಸಮಯದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಕೃಷ್ಣಾ ನದಿಯಲ್ಲಿನ ನೀರು ಖಾಲಿಯಾದಗ ಓಪನ್ ಫಿಲ್ಲರ್ ಹಾಕಿ ಫಿಲ್ಲರ್ ಎತ್ತರಿಸುವ ಟೆಂಡರ್ ಆಗಿದ್ದು.ಆದರೆ ಸಮೀಪವೇ ಹಿಪ್ಪರಗಿ ಜಲಾಶಯವಿರುವ ವರ್ಷಪೂರ್ತಿ ನೀರು ನದಿಯಲ್ಲಿರುತ್ತದೆ. ಇಂತಹ ಸಮಯದಲ್ಲಿ ನದಿಯಲ್ಲಿ ಎಷ್ಟೇ ನೀರಿದ್ದರು ಫೈಲಿಂಗ್ ಮಾಡಿ ಫಿಲ್ಲರ್ ಹಾಕಿದರೆ.ನದಿಯಲ್ಲಿ ಸೇತುವೆ ನಿರ್ಮಾಣ ವರ್ಷಪೂರ್ತಿ ಮಾಡಬಹುದು. ಈಗಿನ ಟೆಂಡರು ಕೇವಲ ವರ್ಷದಲ್ಲಿ 2 ತಿಂಗಳದಲ್ಲಿ ನದಿಯಲ್ಲಿ ನೀರು ಇಲ್ಲದಾಗ ಮಾತ್ರ ಮಾಡಬಹುದು. ಇದಕ್ಕೆ ವೆಚ್ಚ ಹಾಗೂ ವಿನ್ಯಾಸ ಬದಲಿಸಬೇಕಾಗಿದೆ ಎಂಬುದು ಗುತ್ತಿಗೆದಾರನ ಮಾತು. ಇವೆಲ್ಲದರ ನಿರ್ಲಕ್ಷದಿಂದ ಯೋಜನೆಯು ಸಂಪೂರ್ಣ ಹಳ್ಳ ಹಿಡಿದಿದ್ದು, ಪ್ರಸಕ್ತ ವರ್ಷ ಬೇಸಿಗೆ ಶುರುವಾಗಿದ್ದು ಕಾಮಗಾರಿಯತ್ತ ಅಧಿಕಾರಿಗಳು ಹಾಗೂ ನಿರ್ಮಾಣ ಸಂಸ್ಥೆ ಸುಳಿದಿಲ್ಲ. ಈ ಬಾರಿಯಾದರೂ ಪೂರ್ಣಗೊಳ್ಳುವುದೇ ಎಂಬುದು ಈ ಭಾಗದ ಜನರ ಪ್ರಶ್ನೆಯಾಗಿದೆ.