ಬೆಂಗಳೂರು:– ಅಶೋಕ್ ಗುಡುಗಿದರೆ ವಿಧಾನಸೌಧ ನಡುಗಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಈ ಹಿಂದೆ ಯಡಿಯೂರಪ್ಪ ಗುಡುಗಿದರೆ ವಿಧಾನಸಭೆ ನಡುಗುವುದು ಅಂತಾ ಜನರು ಮಾತಾಡುತ್ತಿದ್ದರು. ಮುಂದಿನ ದಿನಗಳಲ್ಲಿ ಅಶೋಕ್ ಗುಡುಗಿದರೆ ವಿಧಾನಸಭೆ ನಡುಗಬೇಕು ಆ ರೀತಿಯಲ್ಲಿ ಅಶೋಕ್ ಸದನದಲ್ಲಿ ಹೋರಾಟ ಮಾಡುತ್ತಾರೆ, ಮಾತನಾಡುತ್ತಾರೆ ಎಂದರು.

ನಿನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಶೋಕ್ ಅವರನ್ನ ವಿಪಕ್ಷ ನಾಯಕರನ್ನಾಗಿ ಘೋಷಣೆ ಮಾಡಲಾಗಿದೆ. ಏಳು ಬಾರಿ ಶಾಸಕರಾಗಿ, ಡಿಸಿಎಂ ಆಗಿ, ಹಲವು ಖಾತೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಹಿರಿಯರ ಅಪೇಕ್ಷೆಯಂತೆ ಮೋದಿ ಅವರು, ನಡ್ಡಾ, ಅಮಿತ್ ಶಾ ಅವರು ಬಿಜೆಪಿ ಮುನ್ನಡೆಸಿಕೊಂಡು ಹೋಗುವಂತೆ ಜವಾಬ್ದಾರಿ ನೀಡಿದ್ದಾರೆ. ಕಳೆದ ಆರು ತಿಂಗಳಿಂದ ಆಡಳಿತ ಪಕ್ಷ ಕಾಂಗ್ರೆಸ್ ವಿಪಕ್ಷ ನಾಯಕರಿಲ್ಲ, ರಾಜ್ಯಾಧ್ಯಕ್ಷ ಇಲ್ಲ ಅಂತ ಟೀಕೆಮಾಡುತ್ತಿದ್ದರು. ನಮ್ಮ ರಾಷ್ಟ್ರೀಯ ನಾಯಕರ ತೀರ್ಮಾನ ದಿಂದ ನನ್ನ, ಅಶೋಕ್ ಅವರನ್ನ ಆಯ್ಕೆ ಮಾಡಿದ್ದಾರೆ. ಈಗ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಹೇಗಾಗಿದೆ ಅಂದರೆ ನಮ್ಮ ಆಯ್ಕೆಯಿಂದ ಕಂಗೆಟ್ಟಿದ್ದಾರೆ, ಯಾಕಾದರೂ ನಾವು ಬಿಜೆಪಿಯನ್ನು ಟೀಕಿಸಿದೆವೋ ಎಂದು ಕೊಳ್ಳುತ್ತಿದ್ದಾರೆ” ಎಂದರು.

