ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಶ್ರೀ ರಾಮಮಂದಿರ ವಾರ್ಡ್ ನಲ್ಲಿ ಅಮೃತ ನಗರೋತ್ಥನ ಅನುದಾನದ ಅಡಿಯಲ್ಲಿ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿಗಳಿಗೆ ಮಾಜಿ ಶಿಕ್ಷಣ ಸಚಿವರು,ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಚಾಲನೆ ನೀಡಿ, ಕಾಮಗಾರಿಯನ್ನ ಪರಿಶೀಲನೆ ಮಾಡಿದರು. ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ರಾಘವೇಂದ್ರರಾವ್, ಉಪಾಧ್ಯಕ್ಷರಾದ ಬಿ.ಎನ್.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಯಶಸ್ ನಾಯಕ್ ರವರು ಉಪಸ್ಥಿತರಿದ್ದರು
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳು ಉತ್ತಮ ಗುಣಮಟ್ಟದಲ್ಲಿ ಲಭಿಸಬೇಕು ಎಂದು ಪ್ರತಿಯೊಂದು ಕಾಮಗಾರಿಗಳನ್ನು ಯೋಜನೆ ರೂಪಿಸಿ ಜಾರಿಗೆ ತರಲಾಗುತ್ತಿದೆ.ಜನರ ಸಮಸ್ಯೆಗಳಾದ ರಸ್ತೆ,ಕುಡಿಯುವ ನೀರು ಮತ್ತು ಪರಿಸರದ ಕುರಿತು ಹೆಚ್ಚಿನ ಆದ್ಯತೆ ನೀಡಲಾಗಿದೆ.ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ರಸ್ತೆಗಳಿಗೆ ಇನ್ನು ಒಂದು ತಿಂಗಳಲ್ಲಿ ಡಾಂಬರೀಕರಣ ಮಾಡಲಾಗುವುದು.

ಸಾರ್ವಜನಿಕರ ವಿನಾಕಾರಣ ರಸ್ತೆ ಅಗೆಯಬಾರದು ಮತ್ತು ಖಾಸಗಿ ಕಂಪನಿಗಳು ರಸ್ತೆ ಅಗೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶ್ರೀರಾಮ ಮಂದಿರ ಆಟದ ಮೈದಾನ 6ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. ಡಿಸೆಂಬರ್ ನಲ್ಲಿ ಆಟದ ಮೈದಾನವನ್ನು ಮಾನ್ಯ ಮುಖ್ಯಮಂತ್ರಿಗಳ ಅಮೃತಹಸ್ತದಿಂದ ಲೋಕರ್ಪಣೆ ಮಾಡಲಾಗುವುದು ಎಂದು ಎಸ್.ಸುರೇಶ್ ಕುಮಾರ್ ರವರು ಹೇಳಿದರು
