ಬೆಂಗಳೂರು: ಜೇಬು ಕತ್ತರಿಸಿ ಚಿನ್ನಾಭರಣ ಎಗರಿಸಿದ್ದ ಆರೋಪಿಗಳು ಸಿಟಿ ಮಾರ್ಕೆಟ್ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೆಂಗಳೂರಿನ ಮಾರ್ಕೆಟ್ ನ ಜನಸಂದಣಿಯಲ್ಲಿ ಜೇಬಿಗೆ ಕತ್ತರಿ ಹಾಕಿ ಸದ್ದಿಲ್ಲದಂತೆ ಪರಾರಿಯಾಗುತ್ತಿದ್ದರು. ಸಯ್ಯದ್ ಬಾಬಾಜಾನ್, ಕಲೀಂಖಾನ್, ಸುರೇಶ್ ಬಂಧಿತ ಆರೋಪಿಗಳಾಗಿದ್ದಾರೆ.
ಮಾರ್ಕೆಟ್ ನಲ್ಲಿ ಜನರು ಚಿನ್ನ ಖರೀದಿಸಿ ಜೇಬಿನಲ್ಲಿ ಇಟ್ಟುಕೊಂಡು ಹೋಗುತ್ತಿದ್ದಾಗ ಖತರ್ನಾಕ್ ಕಳ್ಳರು ಜೇಬು ಕತ್ತರಿಸಿ ಚಿನ್ನಾಭರಣ ಎಗರಿಸಿದ್ದರು, ನಂತರ ಕದ್ದ ಚಿನ್ನವನ್ನು ಕರಗಿಸಿ ಗಟ್ಟಿ ರೂಪದಲ್ಲಿ ಮಾರಾಟ ಮಾಡುತ್ತಿದ್ದರು. ಈ ಸಂಬಂಧ ಪೊಲೀಸರು ಬಂಧಿತರಿಂದ 4 ಲಕ್ಷ 14ಸಾವಿರ ಮೌಲ್ಯದ 92 ಗ್ರಾಂ ಚಿನ್ನ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
