ಮಂಡ್ಯ :- ದೇಶದ ಪ್ರಧಾನ ಮಂತ್ರಿಗೆ ಗೌರವ ಕೊಡುವುದು ಎಲ್ಲಾ ಸರ್ಕಾರಗಳ ಕರ್ತವ್ಯ ಆಗಿದ್ದು, ಪ್ರಧಾನಿಯವರಿಗೆ ಭದ್ರತೆಯೊದಗಿಸಲು ವಿಫಲವಾದಂತ ಪಂಜಾಬ್ ಸರ್ಕಾರವನ್ನು ಬರ್ಕಾಸ್ತ್ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಮಾತನಾಡಿದ ಸಿಎಂ ಪಂಜಾಬ್ ಸರ್ಕಾರ ಪ್ರಧಾನ ಮಂತ್ರಿಗೆ ಭದ್ರತೆ ಕೊಡಲು ವಿಫಲವಾಗಿದೆ. ಪ್ರಧಾನಿಯವರು ಮುಕ್ತವಾಗಿ ಓಡಾಡಲು ಅವಕಾಶ ನೀಡದಿರುವುದು ಖಂಡನೀಯ ಹಾಗೂ ಭದ್ರತಾ ಲೋಪದ ಬಗ್ಗೆ ತನಿಖೆಯಾಗಬೇಕು. ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಗುಡುಗಿದರು.

ಪಂಜಾಬ್ ನಲ್ಲಿ ಮೊದಲ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ತೆರಳಿದ್ದಂತ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಂಜಾಬ್ ಸರ್ಕಾರ ಭದ್ರತೆ ನೀಡಲು ವಿಫಲವಾಗಿತ್ತು.
ವರದಿ: ಗಿರೀಶ್ ರಾಜ್, ಮಂಡ್ಯ