ಮಂಗಳೂರು : ಬೆಂಗಳೂರಿನ ಬಾಲವಾಗ್ಮಿ ಹಾರಿಕಾ ಮಂಜುನಾಥ ವಿರುದ್ಧ ಮುಸ್ಲಿಂ ಸಮುದಾಯವು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ FIR ದಾಖಲಾಗಿದೆ.ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿ ಚಾಮುಂಡಿಕಲ್ಲು ನಿವಾಸಿ ಶಬ್ಬೀರ ಎಂಬವರು.ಬೆಳ್ತಂಗಡಿಯಲ್ಲಿ ನಡೆದ ಶೌರ್ಯ ಪಥ ಸಂಚಲನ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಾರಿಕ ಮಂಜುನಾಥ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.ವಾರದ ಹಿಂದೆ ಬೆಳ್ತಂಗಡಿಯಲ್ಲಿ ನಡೆದ ಗೀತಾ ಜಯಂತಿ ಅಂಗವಾಗಿ ವಿಶ್ವಹಿಂದೂ ಪರಿಷತ್ ಭಜರಂಗದಳ,
ಮಾತೃ ಮಂಡಳಿ,ದುರ್ಗ ವಾಹಿನಿ ಪ್ರಖಂಡ ಇದರ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಹಾರಿಕಾ ಮಂಜುನಾಥ ಭಾಗವಹಿಸಿದ್ದರು. ಈ ವೇಳೆ ಭಾಷಣ ಮಾಡುವಾಗ ಮುಸ್ಲಿಂಮರು ಮಸಿದೀಯಲ್ಲಿ ಐದು ಹೊತ್ತಿನ ನಮಾಜ್ಗೆ ಕರೆ ಕೊಡುವ ಅಜಾನ್ನಲ್ಲಿ ಕಾಫಿರ್”ಮುಸ್ಲೀಮೇತರರನ್ನು”ಕೊಲ್ಲಲು ಕರೆ ಕೊಡುತ್ತಿದ್ದಾರೆ ಎಂದು ಭಾಷಣ ಮಾಡಿ ಮುಸ್ಲಿಂ ಸಮುದಾಯಕ್ಕೆ ಅವಹೇಳನ ಮಾಡಿದ್ದಾರೆ. ಅದರ ಒಟ್ಟಿಗೆ ಹಿಂದೂ ಭಾಂದವರನ್ನು ಮುಸ್ಲಿಂ ಸಮುದಾಯದ ವಿರುದ್ಧ ಉದ್ರೇಕಿಸಲು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
