ಕಂಪ್ಲಿ , ಕರ್ನಾಟಕ ರಾಜ್ಯ ದೇವದಾಸಿ ವಿಮೋಚನಾ ಸಂಘ ತಾಲೂಕ ಘಟಕದಿಂದ ಮಂಗಳವಾರ ರಂದು ದೇವದಾಸಿ ಮಹಿಳೆಯರಿಗೆ ಸರ್ಕಾರದಿಂದ ದೊರೆಯಬಹುದಾದ ಮೂಲಭೂತ ಸೌಲಭ್ಯಗಳನ್ನು ತಕ್ಷಣವೇ ಕಲ್ಪಿಸಬೇಕೆಂದು ಒತ್ತಾಯಿಸಿ ದೇವದಾಸಿ ಮಹಿಳೆಯರು ಕಂಪ್ಲಿ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಮಂಗಳವಾರಂದು ಪ್ರತಿಭಟನೆ ನಡೆಸಿದರು. ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರು ಹುಲಿಗೆಮ್ಮ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡರು ಸಹ ಇದುವರೆಗೆ ದೇವದಾಸಿ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಗೊಳಿಸುವಲ್ಲಿ ಸರ್ಕಾರ ವಿಪ ಲ ವಾಗಿದೆ.
ವಂಚನೆಗೆ ಒಳಗಾದ ದೇವದಾಸಿ ಮಹಿಳೆಯರಿಗೆ ನಿವೇಶನ ವಸತಿ ಮಾಶಾಸನ ಹೆಚ್ಚಳ ಉಪಜೀವನಕ್ಕಾಗಿ ಭೂಮಿ ಸೇರಿದಂತೆ ಸರಕಾರದ ನೇಮಕಾತಿಯಲ್ಲಿ ವಿಶೇಷ ಆದ್ಯತೆ ಕಲ್ಪಿಸುವಂತೆ ತಾಲೂಕು ಅಧ್ಯಕ್ಷರು ಹುಲಿಗೆಮ್ಮ ತಿಳಿಸಿದರು ಜೊತೆಗೆ ದೇವದಾಸಿ ಪಟ್ಟಿಯಲ್ಲಿ ಹೊರಗೂಳಿದ ಮಹಿಳೆಯರನ್ನು ಸೇರ್ಪಡೆಗೊಳಿಸುವುದು ಅಂತಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಉದ್ಯೋಗ ಕಲ್ಪಿಸುವುದು ಹಾಗೆ ದೇವದಾಸಿ ಮಕ್ಕಳ ವಿವಾಹಕ್ಕೆ ಮುಂದಾಗುವವರಿಗೆ ಪ್ರೋತ್ಸಾಹ ಧನ ನೀಡುವಿಕೆ ಸೇರಿದಂತೆ ಪ್ರಮುಖ ಏಳು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಎ ಸ್ವಾಮಿ ತಾಲೂಕು ಅಧ್ಯಕ್ಷರು ಹುಲಿಗೆಮ್ಮ. ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಶೇಖಣ್ಣ ಹಾಗೂ. ತಾಲೂಕು ಮಟ್ಟದ ಎಲ್ಲಾ ದೇವದಾಸಿ ಮಹಿಳೆಯರು ಸೇರಿದಂತೆ ಅಪಾರ ಮಹಿಳೆಯರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು ಸರ್ಕಾರ ನಿರ್ಲಕ್ಷ ಧೂಳ ಅನುಸರಿಸಿದಲ್ಲಿ ಅನಿರ್ದಿಷ್ಟ ಧರಣಿಯನ್ನು ನಡೆಸಲಾಗುವುದೆಂದು ಎಚ್ಚರಿಸಿದರು