ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವಧನ ಹೆಚ್ಚಿಸುವಂತೆ ಒತ್ತಾಯಿಸಿ ಇಂದು ಧರಣಿ ನಡೆಸಿದರು.ಈ ಬಾರಿಯ ಬಜೆಟ್ ನಲ್ಲಿ ವಿವಿಧ ಯೋಜನೆಗಳಡಿ ಸ್ಕೀಮ್ ವರ್ಕರ್ಸ್ ಗಳಾಗಿ ದುಡಿಯುತ್ತಿರುವ ಮಹಿಳಾ ಸಮುದಾಯವನ್ನು ಸಬಲೀಕರಣ ಗೊಳಿಸುವ ಬಗ್ಗೆ ನಿರ್ಲಕ್ಷಿಸಿರುವುದು ನಿರಾಶೆಯನ್ನುಂಟು ಮಾಡಿದೆ ಎಂದು ಧರಣಿ ನಿರತರು ಒತ್ತಾಯಿಸಿದರು.
Gruhalakshmi Yojane: ಮಹಿಳೆಯರಿಗೆ ಗುಡ್ನ್ಯೂಸ್ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್ ! – ಇಲ್ಲಿದೆ ಕಂಪ್ಲೀಟ್ ಮಾಹಿತಿ!
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ರಾಜ್ಯಾಧ್ಯಕ್ಷ ಬಿ.ಅಮ್ಮದ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ನೇತೃತ್ವ ವಹಿಸಿದ್ದರು.ಕಳೆದ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಹಾಗೂ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿಯವರು ಆರನೇ ಗ್ಯಾರೆಂಟಿಯಾಗಿ ಘೋಷಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ 15000 ಹಾಗೂ ಸಹಾಯಕಿಯರಿಗೆ 10,000 ರೂ ಮಾಸಿಕ ಗೌರವದನವನ್ನು ಹೆಚ್ಚಳ ಮಾಡುವ ಭರವಸೆ ನೀಡಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳಾಯಿತು ಈವರೆಗೆ ಭರವಸೆ ಈಡೇರಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಸ್ಕೀಮ್ ವರ್ಕರ್ಸ್ ಗಳ ಗೌರವಧನ ಹೆಚ್ಚಿಸುವ ಭರವಸೆಯನ್ನು ಪ್ರಸಕ್ತ ಆರ್ಥಿಕ ಸಾಲಿನಲ್ಲಿಯೇ ಜಾರಿಗೊಳಿಸಬೇಕೆಂದು ಜಯಮ್ಮ ಒತ್ತಾಯಿಸಿದರು.