ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಂಬುವಾರಪಲ್ಲಿ ಗ್ರಾಮದಲ್ಲಿನ ಸುಮಾರು 48 ಎಕರೆಯ ಊರ ಮಾದಿಗ ಇನಾಂತಿ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ದಲಿತರಿಗೆ ಮೋಸ ಮಾಡಿರುವ ಅಧಿಕಾರಿಗಳು ಹಾಗೂ ಪ್ರಭಾವಿ ಮುಖಂಡ ಜಿ.ಆರ್ ಸುರೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಆದಿಜಾಂಭವ ಚಾರಿಟಬಲ್ ಟ್ರಸ್ಟ್ ಹಾಗೂ ಸೇವಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸರಕಾರವು ಸುಮಾರು 75 ವರ್ಷಗಳ ಹಿಂದೆಯೇ ದಲಿತ ಕುಟುಂಬಗಳ ಅಭಿವೃದ್ಧಿಗಾಗಿ ಜಿಲ್ಲೆಯ ನೆಲವಂಕಿ ಹೋಬಳಿಯ ನಂಬುವಾರಪಲ್ಲಿ ಗ್ರಾಮದ ಸರ್ವೆ ನಂ 23, 26, 27, 28 ಹಾಗೂ 39 ರಲ್ಲಿ 48 ಎಕರೆ ಜಮೀನನ್ನು ತಾಲೂಕಿನ ಗ್ರಾಮದಲ್ಲಿ ಇನಾಂತಿ ನೌಕರರಿ ಮಾಡುವ ನಾಲ್ಕು ಕುಟುಂಬಗಳಿಗೆ ಸರಕಾರವೇ ನೀಡಿದ್ದಾರೆ ಈ ಜಾಗದಲ್ಲಿ ಅಂದಿನಿಂದ ವ್ಯವಸಾಯವನ್ನು ಮಾಡಿಕೊಂಡು ಜೀವನ ನಡೆಸುತ್ತಾ ಇದ್ದು ಈ ಜಮೀನಿಗೆ ಪ್ರಭಾವಗಳು ಕಣ್ಣು ಬಿದ್ದಿದ್ದು ದಲಿತರಿಗೆ ಮೋಸ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೊರವಿಮಾಕಲಹಳ್ಳಿಯ ಬಲಾಢ್ಯ ಸಮುದಾಯದ ಜಿ.ಆರ್ ಸುರೇಶ್ ಎಂಬುವವರು ಅಧಿಕಾರಿಗಳಿಗೆ ಲಂಚ ನೀಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಇವತ್ತು ನಮ್ಮಗಳ ಮೇಲೆ ದೌರ್ಜನ್ಯ ಮಾಡಲು ಮುಂದಾಗಿದ್ದಾರೆ ಕೇಳಿದರೆ ಪ್ರಾಣ ತೆಗೆಯುತ್ತೇನೆ ಎಂದು ರಾಜಾರೋಷವಾಗಿ ಬೆದರಿಕೆ ಹಾಕಿದ್ದಾರೆ ಹಣಬಲ ಮತ್ತು ರಾಜಕೀಯ ಬಲದಿಂದ ನಮ್ಮ ಜಮೀನನ್ನು ಕಳಬಳಿಸಲು ಮುಂದಾಗಿದ್ದು ಅವರ ವಿರುದ್ದ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು
ಈ ಸಂದರ್ಭದಲ್ಲಿ ಮಾದಿಗ ದಂಡೋರ ಜಿಲ್ಲಾ ಅಧ್ಯಕ್ಷ ಹೂಹಳ್ಳಿ ಕೃಷ್ಣಪ್ಪ ಮಾತನಾಡಿ ದಲಿತ ಜಮೀನು ಕಬಳಿಸಲು ಮುಂದಾಗಿರುವ ಜಿ.ಆರ್ ಸುರೇಶ್ ಸೃಷ್ಟಿಸಿರುವ ನಕಲಿ ದಾಖಲೆಗಳನ್ನು ರದ್ದು ಮಾಡಬೇಕು ಜೊತೆಗೆ ಅವರ ವಿರುದ್ದ ಜಾತಿ ನಿಂದನೆ ಕೇಸ್ ದಾಖಲಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಜೊತೆಗೆ ಅ ಜಮೀನನ ನೈಜ ಪಲಾನುಭವಿಗಳಿ ಕುಟುಂಬಗಳಿಗೆ ಊರು ಮಾದಿಗ ಇನಾಂತಿ ಜಮೀನನ್ನು ಮರು ಮಂಜೂರು ಮಾಡಬೇಕು ಜೊತೆಗೆ ಅವರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ್ ಮನವಿ ಸ್ವೀಕರಿಸಿ ಕೂಡಲೇ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದು ಪರಿಶೀಲನೆ ನಡೆಸಿ ನಿಮ್ಮ ಬೇಡಿಕೆ ಈಡೇರಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಆದಿಜಾಂಭವ ಸಂಘಟನೆಯ ಮುಖಂಡರಾದ ಡಿ.ಶ್ರೀನಿವಾಸ್, ವೆಂಕಟೇಶ್, ಮಾದಿಗ ದಂಡೋರದ ರಾಜ್ಯ ಗೌರವ ಅಧ್ಯಕ್ಷ ಹಾರೋಹಳ್ಳಿ ಎಂ.ರವಿ, ಚನ್ನಸಂದ್ರ ಮುನಿರಾಜು, ಅಲೇರಿ ಮುನಿರಾಜು, ವೆಂಕಟರಮಣ, ತೂಪಲ್ಲಿ ಬಸವರಾಜ್, ದಿನ್ನೆ ಹೊಸಹಳ್ಳಿ ಅಂಜಿ, ಡಿಎಸ್ಎಸ್ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ, ಮುನಿಯಪ್ಪ, ಮುಂತಾದವರು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು