ಚಾಮರಾಜನಗರ: ಇಡೀ ರಾಜ್ಯವೇ ಇಂದು ಆಷಾಡ ಮಾಸದ ಮೊದಲ ಶುಕ್ರವಾರವನ್ನು ಅದ್ದೂರಿಯಾಗಿ ಆಚರಸಿ ಮನೆದೇವರಿಗೆ ಅಥವಾ ಹೆಣ್ಣು ದೇವರಿಗೆ ಪೂಜೆ ಸಲ್ಲಿಸಿ ಸಂಭ್ರಮಿಸ್ತಾ ಇದ್ರೆ ಆ ಊರಲ್ಲೆ ಮಾತ್ರ ಆಷಾಡಮಾಸದ ಮೊದಲ ಶುಕ್ರವಾರಂದು ಸೂತಕದ ಛಾಯೇ ಆವರಿಸಿತ್ತು…. ಬೆಳಂಬೆಳಗ್ಗೆ ಆ ಊರಿನ ಆ ಮನೆಯನ್ನು ನೋಡಿದವರಿಗೆ ಶಾಕ್ ಕಾದಿತ್ತು … ಒಂದೇ ಮನೆಯೆ ದಂಪತಿ ಮಗು ಸೇರಿ ಮೂವರು ಮನೆಯೊಳಗೆ ಶವವಾಗಿದ್ರು…. ಈ ದೃಶ್ಯ ನೋಡಿದವರು ಒಮ್ಮೇಲೆ ಬೆಚ್ಚಿಬಿದ್ರು….ಅದೂ ಏನೂ ಅದು ಎಲ್ಲೀ ಅಂತೀರಾ ನೋಡಿ ಈ ಸ್ಟೋರೀನಾ.
ಗಡಿ ಜಿಲ್ಲೆ ಚಾಮರಾಜನಗರ ತಾಲೂಕಿನ ಬೇಡರಪುರ ಗ್ರಾಮದಲ್ಲಿ ಬೆಳಂಬೆಳಗ್ಗೆ ಒಂದೇ ಕುಟಂಬದವರು ಮಗು ಸಮೇತ ನೇಣಿಗೆ ಶರಣಾಗಿದ್ದಾರೆ. ಅಕ್ಕ ಹಾಗೂ ತಾಯಿಗೆ ಆಸ್ತಿ ಸಮಭಾಗಿದೆ ಎಂದು ಬೇಸರಗೊಂಡು ಒಂದೇ ಕುಟುಂಬದ ಮೂವರು ನೇಣಿಗೆ ಶರಣಾಗಿರುವ ಘಟನೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ.

ಬೇಡರಪುರ ಗ್ರಾಮದ ಶಿವನಾಂಕಾರಪ್ಪ ತಾಯಿ ಪಚ್ಚಮ್ಮ ಎಂಬುವವರ ಮಗ ಮಹದೇವಸ್ವಾಮಿ (48) ಸೊಸೆ ಸವಿತಾ(40) ಸಿಂಚನಾ(13) ನೇಣಿಗೆ ಶರಣಾದವರು. ಒಂದೇ ಕುಟುಂಬದವರು ಸಾಯುವ ಮುನ್ನಾ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.
ನಮ್ಮ ಸಾವಿಗೆ ತಾಯಿ ದೇವಿರಮ್ಮ, ಅಕ್ಕಂದಿರಾದ ಮಂಜುಳಾ ಹಾಗೂ ಮಹೇಶ್ವರಿ ಭಾವ ಮಲ್ಲೇಶ್ ಕಾರಣ , ಇವರಿಗೆ ಶಿಕ್ಚೆಯಾಗಬೇಕು ಎಂದು ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾರೆ.
ಏನಿದು ಘಟನೆ?
ಮಹದೇವಸ್ವಾಮಿಗೆ ಬೇಡರಪುರ ಗ್ರಾಮದಲ್ಲಿ ಒಂದಷ್ಟು ಕೃಷಿ ಜಮೀನಿದ್ದು ತೋಟದಲ್ಲಿ ಉತ್ತಮವಾಗಿ ತೆಂಗಿನಕಾಯಿ ಬರ್ತಾ ಇತ್ತು. ಮೊದ ಮೊದಲು ಹಣಕಾಸಿಗೆ ಕಷ್ಟ ಪಡ್ತಾ ಇದ್ದ ಮಹದೇವಸ್ವಾಮಿ ಪಿತ್ರಾರ್ಜಿತ ಆಸ್ತಿಯಲ್ಲಿ ಚೆನ್ನಾಗಿ ದುಡಿದು ಜಮೀನನ್ನು ಫಲವತ್ತಾಗಿ ಇಟ್ಕೊಂಡಿದ್ದ. ಕೃಷಿ ಜೊತೆಗೆ ಮಹದೇವಸ್ವಾಮಿ ಡ್ರಿಪ್ ಅಳವಡಿಸುವ ಕೆಲಸವನ್ನೂ ಮಾಡ್ಕೊಂಡಿದ್ದ. ಆತನ ಪತ್ನಿ ಸವಿತಾ ಕೂಡ ಟೈಲರಿಂಗ ಮಾಡ್ಕೊಂಡು ಇಬ್ರೂ ಉತ್ತಮವಾದ ಸಂಪಾದನೆ ಮಾಡಕೊಂಡು ಉತ್ತಮವಾಗಿ ಜೀವನ ನಡೆಸಿಕೊಂಡು ಹೋಗ್ತಾ ಇದ್ರು . ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದು ಒಬ್ಬಳು ಕರಿನಂಜನಪುರದ ತಾತನ ಮನೆಯಲ್ಲಿ ಇದ್ದಳು ಮತ್ತೊಬ್ಬಳು ಇವರ ಜೊತೆನೆ ಇದ್ದಳು ಎನ್ನಲಾಗಿದೆ.
ಮಹದೇವಸ್ವಾಮಿ ಊರಲ್ಲಿ ಇತ್ತೀಚೆಗೆ ಸ್ವಂತವಾಗಿ ಒಂದು ಮನೆಯನ್ನು ಕಟ್ಟಿಕೊಂಡಿದ್ದ . ಆದರೆ ಆಸ್ತಿ ವಿಚಾರವಾಗಿ ಗಲಾಟೆ ನಡೆದು ಆ ಮನೆ ಗೃಹ ಪ್ರವೇಶಕ್ಕೆ ಅಕ್ಕಂದಿರನ್ನ ಕರೀಯಲಿಲ್ಲ ಎನ್ನಲಾಗಿದೆ.ಅಷ್ಟಕ್ಕೆ ತಾಯಿ ಸೇರಿ ಹೆಣ್ಣು ಮಕ್ಕಳು ಪಿತ್ರಾರ್ಜಿತ ಭಾಗ ಬೇಕು ಅಂತ ಕೋರ್ಟಿಗೆ ಕೇಸು ಹಾಕೊಂಡ್ರು. ಆ ಕೋರ್ಟಿನ ಕೇಸಲ್ಲಿ ಸಮಭಾಗವಾಗಿತ್ತು ಎಂದು ತಿಳಿದುಬಂದಿದೆ.
ಕೋರ್ಟಲ್ಲಿ ಸಮಭಾಗವಾದರೆ ನಾನು ಆತ್ಮಹತ್ಯೆ ಮಾಡ್ಕೋತಿನಿ ಅಂತು ಮಹದೇವಸ್ವಾಮಿ ಪತ್ನಿ ಸವಿತಾ ಗಂಡನೊಂದಿಗೆ ಹೇಳ್ತಾ ಇದ್ಲು ಎಂದು ತಿಳಿದುಬಂದಿದೆ.
ಇತ್ತೀಚೆಗೆ ಕೋರ್ಟಿನಲ್ಲಿ ಎದುರಾಳಿಯವರಿಗೆ ಸಮಭಾಗ ನೀಡಬೇಕು ಎಂದು ಡಿಕ್ರಿ ಆಗಿತ್ತು ಎನ್ನಲಾಗಿದ್ದು ಆ ವಿಚಾರದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗ್ತಾ ಇದೆ.
ನೇಣು ಬಿಗಿದು ಸಾವನ್ನಪ್ಪಿದ ಮನೆಯೊಳಗೆ ಸವಿತಾ ಬಳಿ ಒಂದು ಡೆತ್ ನೋಟ್ ಸಿಕ್ಕಿದ್ರೆ ಮಹದೇವಸ್ವಾಮಿ ಬಳಿ ಮತ್ತೊಂದು ಡೆತ್ ನೋಟ್ ಸಿಕ್ಕಿದೆ.
ಆದರೆ ಸಾವಿಗೆ ನಿಖರ ಕಾರಣ ಇನ್ನೂ ಅಂತ ತಿಳಿದಿಲ್ಲ. ಸದ್ಯಕ್ಕೆ ಶವಗಳನ್ನು ಮರಣೋತ್ತರ ಪರೀಕ್ಚೆಗೆ ಕೊಂಡೊಯ್ಯಲಾಗಿದ್ದು ವರದಿ ಬಂದ ನಂತರವಷ್ಟೆ ಸಾವಿಗೆ ನಿಖರ ಕಾರಣ ತಿಳಿಯಲಿದೆ. .
ಒಟ್ಟಾರೆ, ಆಸ್ತಿ ವಿಚಾರಕ್ಕಾಗಿ ಒಂದೇ ಕುಟುಂಬದ ಮೂವರು ನೇಣಿಗೆ ಶರಣಾದದ್ದು ಮಾತ್ರ ನೋವಿನ ಸಂಗತಿಯಾಗಿದೆ. ಆಸ್ತಿ ಏನೋ ಕೊಡಬಹುದು ಆದರೆ ಸತ್ತ ಪ್ರಾಣಗಳನ್ನು ಯಾರದ್ರೂ ಹಿಂತಿರುಗಿಸಿ ಕೊಡೋಕೇ ಸಾಧ್ಯನಾ ಎಂದು ಅಲ್ಲಿದ್ದ ಜನರು ನೇಣಿಗೆ ಶರಣಾದ ಕುಟುಂಬದ ಬಗ್ಗೆ ಮರುಕ ವ್ಯಕ್ತಪಡಿಸ್ತಾ ಇದ್ರು.ಸಾವಿನ ಬಗ್ಗೆ ಹಲವು ಅನುಮಾನಗಳು ಇದೀಗ ಸೃಷ್ಟಿಯಾಗಿದ್ದು ತನಿಖೆಯಿಂದಷ್ಟೆ ಸತ್ಯಂಶ ಹೊರಬರಬೇಕಿದೆ
