ಗದಗ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಅಳಿಯನಿಂದಲೇ ಮಾವನ ಬರ್ಬರವಾಗಿ ಕೊಲೆ ಮಾಡಲಾಗಿದ್ದು ಖಾಸಿಮಸಾಬ್ ಹಮಸಾಗರ್ ಮೃತ ವ್ಯಕ್ತಿಯಾಗಿದ್ದು ನಡು ರಸ್ತೆಯಲ್ಲಿ ಮಾವನ ಕತ್ತು ಕೊಯ್ದ ಅಳಿಯ
ತುಂಗಭದ್ರಾ ಡ್ಯಾಂ: ನೀರಿನ ರಭಸದ ನಡುವೆಯೇ ಇಂದಿನಿಂದ ಗೇಟ್ ಅಳವಡಿಸುವ ಕಾರ್ಯ!
ಅಳಿಯ ಹುಸೇನಬಾಷಾ ಎಂಬಾತನಿಂದ ಕೃತ್ಯ ನಡೆದಿದ್ದು ಆಸ್ತಿಗಾಗಿ ಕೊಲೆ ಮಾಡಿರುವ ಆರೋಪ ಕಂಡುಬರುತ್ತಿದ್ದು ಅನೇಕ ವರ್ಷಗಳಿಂದ ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಸಿಟ್ಟಿಗೆ ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.