ಬಾಗಲಕೋಟೆ: ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಆದ ಘಟನೆಯನ್ನು ಖಂಡಿಸಿ ಬಜರಂಗದಳ ಮತ್ತು ಹಿಂದು ಸಂಘಟನೆಗಳ ವತಿಯಿಂದ
Hubballi: ಶೀಘ್ರವೇ ರಾಜ್ಯದಲ್ಲಿ ವೃತ್ತಿಪರ ಸಿವಿಲ್ ಎಂಜಿನಿಯರ್ಸ್ ಕಾಯ್ದೆ ಜಾರಿಗೆ: ಸತೀಶ್ ಜಾರಕಿಹೊಳಿ!
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಗರದ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಮುಖಂಡ ರವಿ ಜವಳಗಿ ಮಾತನಾಡಿ, ನಮ್ಮ ನಾಡಿನಲ್ಲಿಯೇ ಗಣೇಶ ಉತ್ಸವ ಆಚರಿಸಲು ತೊಂದರೆಯಾಗುವುದು ದುರ್ಧೈವದ ಸಂಗತಿ. ಘಟನೆಯಲ್ಲಿ ಮತಾಂದ ಶಕ್ತಿಗಳು ಚಪ್ಪಲಿ,ಕಲ್ಲು, ಪೆಟ್ರೋಲ್ ಬಾಂಬ್ ಗಳನ್ನು ಎಸೆದು ಹಿಂದುಗಳ ಭಾವನೆಗೆ ಧಕ್ಕೆ ತಂದಿರುವುದು ಖಂಡನೀಯವಾಗಿದೆ .ರಾಜ್ಯದಲ್ಲಿ ತಾಲಿಬಾನ್ ಆಡಳಿತ ಇದೇಯಾ ಎಂದು ಪ್ರಶ್ನಿಸುತ್ತಾ, ಪೊಲೀಸರು ಗಣೇಶನನ್ನು ಬಂಧಿಸುವ ಕೆಲಸ ಮಾಡಿದ್ದು, ಇದರ ಶಾಪ ಸಿದ್ರಾಮಯ್ಯನವರ ಸರ್ಕಾರಕ್ಕೆ ತಟ್ಟುತ್ತದೆ.
ಎಂದು ಆಕ್ರೋಶ ಹೊರಹಾಕಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಹನಮಂತ ಜಮಾದಾರ, ವಿಜಯಕುಮಾರ ಸಬಕಾಳೆ, ಮಹಾಲಿಂಗ ಕಂಕಣವಾಡಿ, ಶ್ರೀಶೈಲ ಮಠ, ಪುಂಡಲೀಕ ಗಡೇಕರ, ಶಿವನಗೌಡ ಪಾಟೀಲ ಸೇರಿದಂತೆ ಪುರಸಭೆ ಸದಸ್ಯರು, ಮುಖಂಡರು ಇದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ