ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ನಾಲ್ಕು ದಿನಗಳ ಕಾಲ ಅಮೆರಿಕಾ ಪ್ರವಾಸದಲ್ಲಿದ್ದು ಅಮೆರಿಕ ಕಾಂಗ್ರೆಸ್ನ( ಸಂಸತ್) ಜಂಟಿ ಅಧಿವೇಶನದಲ್ಲಿ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ವಿಕಾಸಗೊಳ್ಳುತ್ತಿರುವ ಡೈನಾಮಿಕ್ಸ್ ಬಗ್ಗೆ ಮೋದಿ ಕಳವಳ ವ್ಯಕ್ತಪಡಿಸಿದರು.
“ಬಲವಂತದ ಮತ್ತು ಮುಖಾಮುಖಿಯ ಕಪ್ಪು ಮೋಡಗಳು ತಮ್ಮ ನೆರಳನ್ನು ಬೀರುತ್ತಿವೆ” ಎನ್ನುವ ಮೂಲಕ ಚೀನಾ ಹೆಸರು ಪ್ರಸ್ತಾಪಿಸದೇ ಅಲ್ಲಿನ ಸ್ಥಿರತೆಗೆ ನಾವು ಮಾಡಬೇಕಾದ ಕೆಲಸದ ಬಗ್ಗೆ ಪ್ರತಿಪಾದನೆ ಮಾಡಿದರು.

ಇಂಡೋ – ಪೆಸಿಫಿಕ್ನಲ್ಲಿ ಸ್ಥಿರತೆಯ ಮಹತ್ವವನ್ನು ಎತ್ತಿ ಹಿಡಿದ ಪ್ರಧಾನಿ ಮೋದಿ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸಂಬಂಧದಲ್ಲಿ ಇಂಡೋ ಫೆಸಿಪಿಕ್ ರಕ್ಷಣೆ ಬಗ್ಗೆ ಕಾಳಜಿ ಹೊಂದಿರುವುದನ್ನ ವಿಶ್ವಕ್ಕೆ ರವಾನಿಸಿದರು. ಈ ಪ್ರದೇಶವು ಇತರರ ಹಿಡಿತದಿಂದ ಮುಕ್ತವಾಗಬೇಕಾದ ಅಗತ್ಯವಿದೆ ಎಂದರು. ಅಲ್ಲಿ ಎಲ್ಲಾ ರಾಷ್ಟ್ರಗಳು ಭಯ ಅಥವಾ ಬಲವಂತವಿಲ್ಲದೆ ಸ್ವತಂತ್ರ ಆಯ್ಕೆಗಳನ್ನು ಹೊಂದಲು ಅವಕಾಶ ಸಿಗಬೇಕು. ಇಲ್ಲಿನ ರಾಷ್ಟ್ರಗಳ ಜನರನ್ನು ಉಸಿರುಗಟ್ಟಿಸದಂತೆ ಪ್ರಗತಿ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಇಂಡೋ-ಪೆಸಿಫಿಕ್ ಅನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದು ಪ್ರಧಾನಿ ಮೋದಿ ಅಮೆರಿಕದ ಸಂಸತ್ನಲ್ಲಿ ಪ್ರತಿಪಾದಿಸುವ ಮೂಲಕ ಚೀನಾಕ್ಕೆ ಪರೋಕ್ಷವಾಗಿ ನೇರ ಎಚ್ಚರಿಕೆ ನೀಡಿದರು.
ಇದೇ ವೇಳೆ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ತತ್ವಗಳನ್ನು ಗೌರವಿಸುವ ಮಹತ್ವದ ಕುರಿತು ಮಾತನಾಡಿದ ಪಿಎ ಮೋದಿ ಇಂಡೋ-ಪೆಸಿಫಿಕ್ನಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಸಾರ್ವಭೌಮತ್ದದ ಹೋರಾಟ ಮಾಡುವ ಕಾಲ ಇದಲ್ಲ ಎಂದು ಪ್ರತಿಪಾದಿಸಿದರು. ಈ ಪ್ರದೇಶವು ವಿಶೇಷವಾಗಿ ದಕ್ಷಿಣ ಚೀನಾ ಸಮುದ್ರ ಇಂತಹ ಚಟುವಟಿಕೆಗಳಿಗೆ ಕಾರಣವಾಗಿದೆ. ಚೀನಾ ಇಂಡೋ ಪೆಸಿಪಿಕ್ ಪ್ರದೇಶದಲ್ಲಿ ಚೀನಾ ತನ್ನ ಸಾರ್ವಭೌಮತ್ವ ಪ್ರಚುರ ಪಡಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ನೆಲದಲ್ಲಿ ನಿಂತು ಈ ಬಗ್ಗೆ ಮಾತನಾಡುವ ಮೂಲಕ ಮೋದಿ ಶಾಂತಿಯ ಸಂದೇಶದ ಜೊತೆ ಸುಮ್ಮನಿರಲ್ಲ ಎಂಬ ಎಚ್ಚರಿಕೆಯನ್ನು ಪರೋಕ್ಷವಾಗಿ ರವಾನಿಸಿದ್ದಾರೆ.
