ನವದೆಹಲಿ: ಅಯೋಧ್ಯೆ (Ayodhya) ಭೇಟಿ ವೇಳೆ ಉಜ್ವಲ ಫಲಾನುಭವಿ ಮೀರಾ ಮಾಂಝಿ (Ujjwala Beneficiary Meera Manjhi) ಮನೆಗೆ ಭೇಟಿ ನೀಡಿ ಟೀ ಕುಡಿದಿದ್ದ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ವಿಶೇಷ ಗಿಫ್ಟ್ನೊಂದಿಗೆ ಶುಭಕೋರಿದ್ದಾರೆ. 2024 ರ ಹೊಸ ವರ್ಷಕ್ಕೆ ಮೀರಾ ಮಾಂಝಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಪತ್ರದ ಮೂಲಕ ಪ್ರಧಾನಿ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ಇಡೀ ಕುಟುಂಬಕ್ಕೆ ಉಡುಗೊರೆಗಳನ್ನು ಕಳುಹಿಸಿದ್ದಾರೆ.
PM Modi wrote a letter to Ujjwala beneficiary Meera Manjhi and sent gifts for her and her family
PM had visited her home during his Ayodhya visit on December 30 pic.twitter.com/2BKS0SV7qp
— ANI (@ANI) January 3, 2024
ಪತ್ರದಲ್ಲೇನಿದೆ..?: ಮೀರಾ ದೇವಿ ಜೀ, ನಿಮಗೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ 2024 ರ ಹೊಸ ವರ್ಷದ ಶುಭಾಶಯಗಳು. ಭಗವಾನ್ ಶ್ರೀರಾಮನ ಪವಿತ್ರ ನಗರವಾದ ಅಯೋಧ್ಯೆಯಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದು ಹಾಗೂ ನೀವು ತಯಾರಿಸಿದ ಚಹಾವನ್ನು ಸೇವಿಸಿರುವುದು ಸಂತಸ ತಂದಿದೆ.
ಇಂಡಿಯನ್ ಆಯಿಲ್ ಕಂಪನಿಯಲ್ಲಿ 1603 ಹುದ್ದೆಗಳು ಖಾಲಿ..! ಇಂದೇ ಕೊನೆ ದಿನ – ಬೇಗ ಅಪ್ಲೈ ಮಾಡಿ
ಅಯೋಧ್ಯೆಯಿಂದ ಬಂದ ನಂತರ ಹಲವು ಟಿವಿ ಚಾನೆಲ್ಗಳಲ್ಲಿ ನಿಮ್ಮ ಸಂದರ್ಶನ ನೋಡಿದೆ. ನಿಮ್ಮ ಮತ್ತು ಕುಟುಂಬ ಸದಸ್ಯರ ವಿಶ್ವಾಸ ಮತ್ತು ನಿಮ್ಮ ಅನುಭವಗಳನ್ನು ನೀವು ಹಂಚಿಕೊಂಡ ಸರಳ ನಡೆ ತುಂಬಾ ಇಷ್ಟವಾಯಿತು ಎಂದು ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.
ನಿಮ್ಮಂತಹ ಕೋಟ್ಯಂತರ ದೇಶವಾಸಿಗಳ ಚೈತನ್ಯ ಮತ್ತು ಉತ್ಸಾಹವು ಇಂದು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಮ್ಮ ಗುರಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ನಿಮ್ಮ ಮಕ್ಕಳಿಗೆ ಉತ್ತಮ ಆರೋಗ್ಯ ಮತ್ತು ಕುಟುಂಬದ ಉಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತೇನೆ. ಇಂತಿ ನಿಮ್ಮ ನರೇಂದ್ರ ಮೋದಿ ಎಂದು ಪತ್ರದಲ್ಲಿ ತಿಳಿಸಲಾಗಿದೆ.