ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಅಂಗವಾಗಿ ಗಾಂಧಿನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ ಮೋಹನ್ ಭಾಗಿಯಾಗಿದ್ದರು. ಈ ವೇಳೆ ಗಾಂಧಿನಗರ, ಓಕಳಿಪುರಂ, ಬಿನ್ನಿಪೇಟೆಯಲ್ಲಿ ಸಿಹಿತಿಂಡಿ, ಸುಭಾಷನಗರದಲ್ಲಿ ಔಷಧ ಕಿಟ್ ವಿತರಣೆ ಮಾಡಲಾಯಿತು. ಅಟಲ್ ಬಿಹಾರಿ ಕುರಿತು ಮಾತನಾಡಿದ ಪಿ.ಸಿ ಮೋಹನ್ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತಶತ್ರು ವಾಗಿದ್ದವರು.
ದೇಶದ ಉತ್ತಮ ರಾಜಕಾರಣಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರು ಪಾರದರ್ಶಕ ಆಡಳಿತ ನೀಡುವಲ್ಲಿ ಯಶಸ್ವಿಯ ಹಾದಿಯಲ್ಲಿ ಸಾಗಿದವರು. ಅವರು ನಮಗೆಲ್ಲರಿಗೂ ಆದರ್ಶಪ್ರಿಯರು. ಅವರ ತತ್ವ ಆದರ್ಶಗಳನ್ನು ತಪ್ಪದೇ ಪಾಲಿಸೋಣ ಎಂದರು. ಈ ಸಂದರ್ಭದಲ್ಲಿ ಶಿವಪ್ರಕಾಶ್, ಶೈತಾನ್ ಸಿಂಗ್, ಅನಂತು, ಮುರುಗ, ಗೋಪಾಲಕೃಷ್ಣ, ಶ್ರೀರಾಮ್, ಶಿವರಾಮ್, ಗಿರಿ, ರೇವತಿ, ಶಿವ, ಅರುಣ್, ಬಾಬು ಸುಬ್ರಹ್ಮಣಿ, ಹರಿ, ಮದನ್, ನಾಗರಾಜ್, ಸೆಲ್ವ ದೇವೇಂದ್ರ, ಶ್ರೀನಿವಾಸ್ ಮತ್ತು ಭರತ್ ಸಹ ಉಪಸ್ಥಿತರಿದ್ದರು.
