ಬೆಂಗಳೂರು: ಚಿನ್ನ ಅಂದ್ರೆ ಭಾರತೀಯರಿಗೆ ಕೊಂಚ ಜಾಸ್ತಿಯೇ ಪ್ರೀತಿ. ಮನೆಯಲ್ಲಿ ಹಬ್ಬ-ಹರಿದಿನಗಳ ಸಾಲು ಬಂದ್ರೆ ಮೊದಲು ಯೋಚಿಸುವುದೇ ಚಿನ್ನಾಭರಣ ಖರೀದಿಸುವ ಕುರಿತು. ಹಾಗಿರುವಾಗ ಚಿನ್ನದ ಬೆಲೆ ಇಳಿಕೆಯತ್ತ ಸಾಗಿರಬೇಕು ಎಂಬ ಆಸೆಯೂ ತಪ್ಪಲ್ಲ. ಆದರೆ ದೈನಂದಿನ ದರ ಬದಲಾವಣೆಯಲ್ಲಿ ಚಿನ್ನಾಭರಣ ಬೆಲೆ ಏರಿಳಿತ ಕಾಣುತ್ತಿರುವುದು ಸಹಜ. ನಿನ್ನೆ ಆಭರಣದ ಬೆಲೆ ಏರಿಕೆಯತ್ತ ಸಾಗಿತ್ತು. ಇಂದು ಕೂಡ ಚಿನ್ನದ ದರ ಏರಿಕೆಯಾಗಿದೆ. ಬೆಳ್ಳಿ ದರ ಸ್ಥಿರವಾಗಿದೆ. ನೀವು ಕೂಡಿಟ್ಟ ಹಣ ದಲ್ಲಿ ಆಭರಣ ಕೊಳ್ಳುವ ಕುರಿತಾದ ಯೋಚನೆ ಇದ್ದರೆ ಇಂದು ಖರೀದಿಸಬಹುದು. ಪ್ರಮುಖ ನಗರಗಳ ಮಾರುಕಟ್ಟೆಯಲ್ಲಿ ಆಭರಣದ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,450 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,54,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ 900 ರೂಪಾಯಿ ಏರಿಕೆಯಾಗಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,590 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,95,900 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ 1,000 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ಬೆಲೆ ಸ್ಥಿರವಾಗಿದ್ದು, ಕೆಜಿ ಬೆಳ್ಳಿಗೆ 62,300 ರೂಪಾಯಿ ನಿಗದಿಯಾಗಿದೆ.

ಚೆನ್ನೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,550 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,55,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ 300 ರೂಪಾಯಿ ಏರಿಕೆಯಾಗಿದೆ. ಇನ್ನು 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,690 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,96,900 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ 300 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ಬೆಲೆ ಸ್ಥಿರವಾಗಿದ್ದು, ಕೆಜಿ ಬೆಳ್ಳಿಗೆ 66,200 ರೂಪಾಯಿ ನಿಗದಿಯಾಗಿದೆ.
ಹೈದರಾಬಾದ್ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,450 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,54,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ 900 ರೂಪಾಯಿ ಏರಿಕೆಯಾಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,590 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,95,900 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ 1,000 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ಬೆಲೆ ಇಳಿಕೆಯಾಗಿದ್ದು, ಕೆಜಿ ಬೆಳ್ಳಿಗೆ 66,000 ರೂಪಾಯಿ ನಿಗದಿಯಾಗಿದೆ.