ಹಾವೇರಿ : ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗೋಕೆ ಅಂತಾನೇ ಕೆಲವರು ವಿಚಿತ್ರ ವಿಡಿಯೋಗಳನ್ನು ಮಾಡಿ ಹಾಕ್ತಾರೆ. ಆದ್ರೆ ಇಲ್ಲೊಬ್ಬ ಲವ್ ಮಿ, ಲವ್ ಮಿ ಅನ್ನೋ ಪ್ರೇಮಿಯೊಬ್ಬನ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಹಾವೇರಿ ನಗರ ಭಾಗದಲ್ಲಿರೋ ಲೇಡಿಸ್ ಪಿಜಿಯಲ್ಲಿ ಈ ಘಟನೆ ನಡೆದಿದ್ದು, ಪಾಗಲ್ ಪ್ರೇಮಿಯೊಬ್ಬ ಲೇಡಿಸ್ ಪಿಜಿಗೆ ಪ್ರವೇಶಿಸಿ ವಿಕೃತಿ ಮೆರೆದಿದ್ದಾನೆ.
ಹಾಡುಹಗಲೇ ಪಿಜಿ ಪ್ರವೇಶಿ ಪ್ರೀತ್ಸೆ,ಪ್ರೀತ್ಸೆ ಅಂತಾ ರಂಪಾಟ ಮೆರೆದಿದ್ದು, ಕೈಮುಗಿತಿನಿ, ಕಾಲಿಗೆ ಬೀಳ್ತಿನಿ ಪ್ರೀತ್ಸೆ ಅಂತಾ ಬೇಡಿಕೊಳ್ಳುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಪ್ರಮೋದ್ ಶರಣಪ್ಪ ಪ್ರೀತ್ಸೆ ಪ್ರೀತ್ಸೆ ಎಂದು ವಿಕೃತಿ ಮರೆದಿದ್ದು, ಯುವತಿ ನಿರಾಕರಿಸಿದರು ಬೆನ್ನು ಬಿದ್ದು ಪ್ರೀತ್ಸೆ ಅಂಥ ಕಾಟ ಕೊಡುತ್ತಿದ್ದಾನೆ. ಹಾವೇರಿಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.