ಕಲಬುರಗಿ: ಪ್ರಕೃತಿ ವಿಕೋಪಗಳಿಂದ ಜಗತ್ತನ್ನು ರಕ್ಷಿಸುವಂತೆ ಪ್ರಾರ್ಥಿಸಿ ಕಲಬುರಗಿಯ ಕರದಾಳದಲ್ಲಿ ಪ್ರತ್ಯಂಗಿರ ಹೋಮ ನಡೆಸಲಾಯಿತು.. ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಲ್ಲಿ ಈ ಹೋಮಕಾರ್ಯ ನೆರವೇರಿತು.
ಪ್ರಣವಾನಂದ ಶ್ರೀಗಳ ನೇತ್ರತ್ವದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ಕೆ ನೂರಾರು ಭಕ್ತರು ಸಾಕ್ಷಿಯಾದರು.. ಅಥರ್ವಣ ವೇದದ ಪ್ರಕಾರ ನಡೆದ ಈ ಪ್ರತ್ಯಗಿಂರ ಹೋಮದಿಂದ ಲೋಕ ಕಲ್ಯಾಣವಾಗಲಿ ಅನ್ನೋ ಉದ್ದೇಶವೂ ಇದೆ ಅಂತ ಶ್ರೀಗಳು ಹೇಳಿದ್ರು.