ಕಲಬುರಗಿ: ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಕರದಳ್ಳಿಯಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಲ್ಲಿ ಇದೇ ತಿಂಗಳ 28 ರಂದು ಲೋಕ ಕಲ್ಯಾಣಾರ್ಥವಾಗಿ ಪ್ರತ್ಯಂಗಿರ ಹೋಮ ಹಮ್ಮಿಕೊಳ್ಳಲಾಗಿದೆ ಅಂತ ಪ್ರಣವಾನಂದ ಶ್ರೀಗಳು ಹೇಳಿದ್ದಾರೆ.. ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಶ್ರೀಗಳು,
ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಬಹುದೊಡ್ಡ ರೀತಿಯಲ್ಲಿ ಪ್ರತ್ಯಂಗಿರ ಹೋಮ ಮಾಡಲಿದ್ದೇವೆ..ಮಾತ್ರವಲ್ಲ ಧಾರ್ಮಿಕ ಸಭೆ ನಡೆಯಲಿದೆ ಅಂತ ಹೇಳಿದ್ರು..ನಿತೀನ್ ಗುತ್ತೇದಾರ್ ಸದಾನಂದ ಪೆರ್ಲ ಸೇರಿದಂತೆ ಈಡಿಗ ಸಮಾಜದ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಉಪಸ್ತಿತರಿದ್ದರು..