ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಈ ವಾರ ನಮ್ರತಾ ಗೌಡ (Namratha Gowda) ಅವರು ಉತ್ತಮವಾಗಿ ಆಡಿದ್ದಾರೆ. ಸ್ಪರ್ಧಿಗಳಿಂದಲೇ ನಮ್ರತಾ ಉತ್ತಮ ಎಂದೆನೆಸಿಕೊಂಡಿದ್ದಾರೆ. 55 ದಿನಗಳ ನಂತರ ನಮ್ರತಾರ ಆಟ ಮತ್ತು ಆ್ಯಕ್ಟಿವಿಟಿ ನೋಡಿ ಸುದೀಪ್ ಕೂಡ ಮೆಚ್ಚುಗೆ ಸೂಚಿಸಿ ಚಪ್ಪಾಳೆ ತಟ್ಟಿದ್ದಾರೆ.
ಕಳೆದ ವಾರ ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡಗೆ (Tanisha Kuppanda) ವೀಕ್ಷಕರಿಂದ ಹೆಚ್ಚಿನ ಮತ ಸಿಕ್ಕಿತ್ತು. ಇದರಿಂದ ನಮ್ರತಾ ತುಂಬ ಬೇಸರ ಮಾಡಿಕೊಂಡಿದ್ದರು. ಸಿಕ್ಕಾಪಟ್ಟೆ ಕೂಗಾಡುವ ತನಿಷಾ ಜನರಿಗೆ ಇಷ್ಟ ಆಗ್ತಾರೆ, ನಾನು ಹೊರಗಡೆ ಸುಮ್ಮನೆ ಪ್ರಾಜೆಕ್ಟ್ ಮಾಡಿಕೊಂಡು ಇರಬಹುದಿತ್ತು ಎಂದು ನಮ್ರತಾ ಹೇಳಿದ್ದರು. ಆದರೆ ಈ ವಾರ ಅವರ ಅದೃಷ್ಟ ಬದಲಾಗಿದೆ. ಈ ವಾರವೇ ನಮ್ರತಾ ಗೌಡ ಅವರು ಸ್ಪರ್ಧಿಗಳ ಕಣ್ಣಲ್ಲಿ ಉತ್ತಮ ಪಟ್ಟದ ಜೊತೆಗೆ ಕಿಚ್ಚ ಸುದೀಪ್ ಅವರಿಂದ ಕಿಚ್ಚನ ಚಪ್ಪಾಳೆಯನ್ನು ಕೂಡ ಪಡೆದರು.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ಕ್ಯಾಪ್ಟೆನ್ಸಿ ಹಣಾಹಣಿಯಲ್ಲಿ ಕಾಲಿಗೆ ಪೆಟ್ಟಾಗಿದ್ದರಿಂದ ತನಿಷಾ ಪರ ನಮ್ರತಾ ಆಟ ಆಡಿದ್ದರು. 4 ಆಟಗಳನ್ನ ಉತ್ತಮವಾಗಿ ಆಡಿ ನಮ್ರತಾ ಸ್ಪರ್ಧಿಸಿದ್ದರು. ಸ್ನೇಹಿತ್ಗೆ ಮಸ್ತ್ ಆಗಿ ಪೈಪೋಟಿ ನೀಡಿದ್ದರು. ಕೊನೆಯ ಹಂತದಲ್ಲಿ ಕ್ಯಾಪ್ಟನ್ ಪಟ್ಟ ಸ್ನೇಹಿತ್ ಪಾಲಾಗಿತ್ತು. ಆದರೂ ಛಲ ಬಿಡದೇ ಆಡಿದ್ದ ನಮ್ರತಾ ಹುಮ್ಮಸ್ಸು ನೋಡಿ ಸುದೀಪ್ ಮೆಚ್ಚಿದ್ದಾರೆ.