ಬೆಂಗಳೂರು ;- ನಗರದ ಹಲವು ಪ್ರದೇಶಗಳಲ್ಲಿ ನಾಳೆಯಿಂದ ಎರಡು ದಿನ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಈ ವಾರಾಂತ್ಯದಲ್ಲಿ, ಅಂದರೆ ಶನಿವಾರ ಮತ್ತು ಭಾನುವಾರದಂದು ಬೆಂಗಳೂರು ನಗರದ ಹಲವೆಡೆ ವಿದ್ಯುತ್ ಕಡಿತಗೊಳಿಸುವ ಸಾಧ್ಯತೆಯಿದೆ.

ಅದರಂತೆ ಮಂಜುನಾಥನಗರ, ಪ್ರಕಾಶ್ ನಗರ, ಸುಬ್ರಹ್ಮಣ್ಯನಗರ, ವಿಜಯನಗರ, ರಾಜಾಜಿನಗರ 2ನೇ ಬ್ಲಾಕ್ ಮತ್ತು 6ನೇ ಬ್ಲಾಕ್, ಅಮರಜ್ಯೋತಿ ನಗರ, ಸರಸ್ವತಿ ನಗರ, ವಿನಾಯಕ ಲೇಔಟ್, ಅಗ್ರಹಾರ, ದಾಸರಹಳ್ಳಿ, ಇಂದಿರಾನಗರ, ಶಂಕರಮಾತಾ ಫಿಡೆಲಿಟಿ, ಐಬಿಎಂ, ಸೀಮೆನ್ಸ್, ಮಾನ್ಯತಾ ರೆಸಿಡೆನ್ಸಿ, ಬಿಟಿಎಸ್ ಲೂಸೆಟ್, ಗೋದ್ರೇಜ್ ಅಪಾರ್ಟ್‌ಮೆಂಟ್, ಹೆಬ್ಬಾಳ್, ಕೆಂಪಪುರ, ವಿನಾಯಕ ಲೇಔಟ್, ಚಿರಂಜೀವಿ ಲೇಔಟ್, ವೆಂಕಟೇಗೌಡ ಲೇಔಟ್, ನೋಕಿಯಾ ಬ್ಲಾಕ್, ಮಧುವನ, ಶ್ರೀರಾಂಪುರ, ಚಾಮುಂಡೇಶ್ವರಿ ಲೇಔಟ್, ರಾಯಲ್ ಎನ್‌ಕ್ಲೇವ್, ಮೇಸ್ತ್ರಿ ಪಾಳ್ಯ, ಥಣಿಸಂದ್ರ, ಎಸ್‌ಎನ್‌ಎನ್ ಕ್ಲರ್ಮಾಂಟ್ ಅಪಾರ್ಟ್‌ಮೆಂಟ್, ಬಿಡಿಎಸ್ ಲೇಔಟ್, ಮಂತ್ರಿ ಲಿಥೋಸ್, ಕಾಫಿ ಬೋರ್ಡ್ ಲೇಔಟ್, ಫಾತೀಮಾ ಲೇಔಟ್, ಮರಿಕೊಪ್ಪಾ ಪಾಲಯ್ಯ, ತಾಳಿಕೊಪ್ಪ ಹಲವು ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
