ಬೆಂಗಳೂರು: ರಾಜ್ಯದ ವಿದ್ಯುತ್ ಪರಿಸ್ಥಿತಿಯ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ವಿದ್ಯುತ್ಗೆ ಈ ಬಾರಿ ಬೇಡಿಕೆ ಇದೆ. ಈ ವರ್ಷ ಮಳೆಯ ಕೊರತೆ ಉಂಟಾಗಿದೆ. ಈ ವರ್ಷ ಒನ್ ಟು ಡಬಲ್ ಇಂಧನಕ್ಕೆ ಬೇಡಿಕೆ ಜಾಸ್ತಿಯಾಗಿದೆ. ನಮಗೆ ಮುಖ್ಯಮಂತ್ರಿಗಳು ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದು ಸಚಿವ ಕೆಜೆ ಜಾರ್ಜ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ವಿದ್ಯುತ್ ಖರೀದಿ ಮಾಡಲು ಹಣಬಿಡುಗಡೆ ಮಾಡಿದ್ದಾರೆ. ಪಂಚಾಬ್ ಮತ್ತು ಯುಪಿಯಿಂದ ವಿದ್ಯುತ್ ಖರೀದಿಗೆ ಮುಂದಾಗುತ್ತಿದ್ದೇವೆ. ಜನವರಿ ತನಕ ವಿದ್ಯುತ್ಗೆ ಕೊರತೆ ಇಲ್ಲ. ಮುಂದಿನ ದಿನಗಳಲ್ಲಿ ಯಾರಿಗೂ ಸಮಸ್ಯೆಯಾಗದಂತೆ ಕ್ರಮ ತೆಗದುಕೊಳ್ಳುತ್ತೇವೆ ಎಂದು ಸಚಿವ ಕೆಜೆ ಜಾರ್ಜ್ ತಿಳಿಸಿದರು.