ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಪವರ್ ಸಮಸ್ಯೆ ಕಂಡು ಬರುತ್ತಿದೆ. ಅದರಂತೆ ಇನ್ನೂ ಎರಡು ದಿನ ಪವರ್ ಸಮಸ್ಯೆ ಮುಂದುವರಿಯಲಿದೆ.
ಬೆಂಗಳೂರಿನ ಕೋರಮಂಗಲದ ಸುತ್ತಮುತ್ತ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಬೆಂಗಳೂರಿನ ಕೋರಮಂಗಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ತಿಳಿಸಿದೆ. ಕೋರಮಂಗಲದಲ್ಲಿ ಮಂಗಳವಾರ ಮತ್ತು ಬುಧವಾರ ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಇರುವುದಿಲ್ಲ.
ಸೇಂಟ್ ಜಾನ್ ವುಡ್ ಅಪಾರ್ಟ್ಮೆಂಟ್ ಆ್ಯಂಡ್ ಆಸ್ಪತ್ರೆ, ತಾವರೆಕೆರೆ, ಆಕ್ಸೆಂಚರ್, ಒರಕಲ್, ಕ್ರೈಸ್ಟ್ ಕಾಲೇಜು, ಬಿಟಿಎಂ ಲೇಔಟ್, ಮೆಜೆಸ್ಟಿಕ್ ಅಪಾರ್ಟ್ಮೆಂಟ್, ಅಕ್ಸಾ, ಆಸಿಸ್ ಭವನ್, ಸುದ್ದಗುಂಟೆ ಪಾಳ್ಯ, ಗುರಪ್ಪನ ಲೇಔಟ್, ವಿಕ್ಟೋರಿಯಾ ಲೇಔಟ್, ಪಾಮ್ ಗ್ರೂವ್ ರೋಡ್, ಬಾಲಾಜಿ ಥಿಯೆಟರ್, ಅಗ್ರಂ ವಿವೇಕಾನಗರ, ಸಣ್ಣೆನಗಹಳ್ಳಿ, ವೋನ್ನರ್, ಆಂಜನೇಯ ಟೆಂಪಲ್ ಸ್ಟ್ರೀಟ್, ಕೆಎಸ್ಆರ್ಪಿ ಕ್ವಾಟ್ರಸ್, ಲಿಂಡನ್, ಯಲಂಗುಂಟೆ ಪಾಳ್ಯಮ್, ಏರ್ ಫೋರ್ಸ್, ರೋಡ್, ರುದ್ರಪ್ಪ ಗಾರ್ಡನ್, ಎಂ.ಜಿ ಗಾರ್ಡನ್, ಆಸ್ತಿನ್ ಟೌನ್, ನೀಲಸಂದ್ರ, ಬಜಾರ್, ಆರ್ಕೆ ಗಾರ್ಡನ್, ಬೆಂಗಳೂರು ಫರ್ನಿಚರ್, ರೋಸ್ ಗಾರ್ಡನ್, ಒಆರ್. ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಟ್ ಆಗಲಿದೆ.