ಬೆಂಗಳೂರು: ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ವಿದ್ಯುತ್ ಸ್ಥಾವರ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆ ಅನೇಕಲ್ ನ ಸಮೀಪದ ದಿಂಡಿಗಲ್ ಜಿಲ್ಲೆಯ ಕನ್ನಿವಾಡಿ ಬಳಿ ನಡೆದಿದೆ, ಕ್ಷಣಾರ್ಧದಲ್ಲಿ ಬೆಂಕಿಯ ತೀವ್ರತೆಯಿಂದಾಗಿ ದಟ್ಟ ಹೊಗೆ ಆವರಿಸಿ ಜನರಲ್ಲಿಆತಂಕ ಸೃಷ್ಟಿಯಾಗಿದೆ. ಇನ್ನು ವಿದ್ಯುತ್ ಸ್ಥಾವರದ ಟ್ರಾನ್ಸ್ ಫಾರ್ಮ್ ಗಳು ಬ್ಲಾಸ್ಟ್ ಆಗಿದ್ದು, ದೊಡ್ಡ ಮಟ್ಟದ ಶಬ್ದ ಕೇಳಿ ಬಂದಿದೆ . ದುರಾದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಸ್ಥಳೀಯ ಮಾಹಿತಿಯ ಮೇರೆಗೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದು, ಘಟನೆಗೆ ಕಾರಣವೇನೆಂಬುದು ತನಿಖೆಯ ನಂತರ ತಿಳಿಯಲಿದೆ.
