ಕಲಬುರಗಿ: ಸತತ ನಾಲ್ಕು ಬಾರಿ ಮುಂದೂಡಿದ್ದ ಕಲಬುರಗಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಮತ್ತೆ ಫಿಕ್ಸ್ ಆಗಿದ್ದು ಇದೇ 20 ರಂದು ಡೇಟ್ ನಿಗದಿಯಾಗಿದೆ.. ಪದೇಪದೇ ಸಭೆ ಮುಂದೂಡಿದ್ದ ಹಿನ್ನಲೆ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ತೀವ್ರ ಕಿಡಿಕಾರಿತ್ತು.
ಹೀಗಾಗಿ ಇದೀಗ ಮತ್ತೆ ದಿನಾಂಕ ನಿಗದಿಯಾಗಿದೆ ಅನ್ನೋ ಮಾತುಗಳು ಕೇಳಿಬರ್ತಿವೆ. ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೇತ್ರತ್ವದಲ್ಲಿ ಸಭೆ ನಡೆಯಲಿದ್ದು ಡಿಸಿ ಕಚೇರಿ ಸಭಾಂಗಣದಲ್ಲಿ ಅವತ್ತು ಬೆಳಿಗ್ಗೆ 10.30 ಕ್ಕೆ ಎಲ್ಲ ಅಧಿಕಾರಿಗಳು ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಿರಬೇಕು ಅಂತ ಜಿಲ್ಲಾಡಳಿತ ಸೂಚಿಸಿದೆ..