ಉಡುಪಿಯ ಕಾಪು ಮಾರಿಗುಡಿಗೆ ನಟಿ ಪೂಜಾ ಹೆಗ್ಡೆ ಭೇಟಿ ಕೊಟ್ಟಿದ್ದಾರೆ. ಬಾಲಿವುಡ್ ಬೆಡಗಿ ಪೂಜಾ ಹೆಗ್ಡೆ ಅವರು ಉಡುಪಿಯ ಕಾಪು ಮಾರಿಗುಡಿಯ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕುಟುಂಬದ ಜೊತೆ ಭಾಗಿಯಾಗಿ ಕಾಪು ಮಾರಿಯಮ್ಮನ ದರ್ಶನ ಪಡೆದಿದ್ದಾರೆ.
Hubballi: ವೀರಶೈವ ಲಿಂಗಾಯತ ಧಾರವಾಡ ಮಹಾಸಭಾ ಜಿಲ್ಲಾ ಘಟದ ಅಧ್ಯಕ್ಷರಿಗೆ ಸನ್ಮಾನ!
ಮಂಗಳೂರಿನವರಾದ ಪೂಜಾ ಹೆಗ್ಡೆ ಅವರು, ಕರಾವಳಿ ಭಾಗದ ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇದೀಗ ಫ್ಯಾಮಿಲಿ ಜೊತೆ ಕಾಪು ಮಾರಿಗುಡಿಗೆ ನಟಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇನ್ನೂ ಕಾಪು ಮಾರಿಗುಡಿಗೆ ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್, ಸೂರ್ಯಕುಮಾರ್ ಯಾದವ್ ಸೇರಿದಂತೆ ಅನೇಕರು ಭೇಟಿ ನೀಡಿದ್ದರು. ಈಗ ಪೂಜಾ ಹೆಗ್ಡೆ ಭೇಟಿ ಕೊಟ್ಟಿದ್ದಾರೆ. ಅಂದಹಾಗೆ, ಸದ್ಯ ಪೂಜಾ ಅವರು ತೆಲುಗು, ತಮಿಳು, ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ