ಹುಬ್ಬಳ್ಳಿ:- ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸ್ ರಿವಾಲ್ವಾರ್ ಸದ್ದು ಮಾಡಿದೆ. ತಪ್ಪಿಸಿಕೊಂಡ ಓಡಲು ಯತ್ನಿಸಿದ ದರೋಡಕೋರನ ಕಾಲಿಗೆ ಪೊಲೀಸರು ಗುಂಡೇಟು ಹಾಕಿದ್ದಾರೆ.
ರೈತನಿಗೆ ಅಪಮಾನ ಪ್ರಕರಣ: ಘಟನೆ ಮರುಕಳಿಸಿದರೆ ಕಾನೂನು ಕ್ರಮ, ಮಾಲ್ಗಳಿಗೆ ಬಿಬಿಎಂಪಿ ಎಚ್ಚರಿಕೆ!
ದರೋಡೆ ಪ್ರಕರಣದ ಆರೋಪಿ ಸೋನು ನಾಯಕ್ ಎಸ್ಕೇಪ್ಗೆ ಯತ್ನಿಸಿದ್ದಾನೆ. ಈ ವೇಳೆ ಉಪನಗರದ ಠಾಣೆ ಇನ್ಸ್ಪೆಕ್ಟರ್ ಎಂ.ಎಸ್. ಹೂಗಾರ್ ಅವರಿಂದ ಪೈರಿಂಗ್ ನಡೆದಿದೆ.
ಹುಬ್ಬಳ್ಳಿಯ ಎಂಟಿಎಸ್ ಕಾಲೊನಿ ಬಳಿ ಘಟನೆ ಜರುಗಿದೆ. ಸ್ಥಳಕ್ಕೆ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗಾಯಳು ಆರೋಪಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ಸೋನು ನಾಯಕ್, ಕಳ್ಳತನ, ದರೋಡೆ ಒಟ್ಟು ೧೨ ಪ್ರಕರಣದಲ್ಲಿ ಬೇಕಾಗಿದ್ದ ಎನ್ನಲಾಗಿದೆ.