ತುಮಕೂರು: ಕಳ್ಳರನ್ನ ಹಿಡಿಯಲು ಹೋಗಿ ಪೊಲೀಸ್ ಸಿಬ್ಬಂದಿಗಳು ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ. ಹೌದು ಕಳ್ಳನನ್ನು ಹಿಡಿಯಲು ಚೇಸ್ ಮಾಡುವ ವೇಳೆ ತುಮಕೂರು ಜಿಲ್ಲೆಯ ಮಧುಗಿರಿ ಪೊಲೀಸ್ ಠಾಣೆ ಸೇರಿದ ಪೊಲೀಸ್ ವಾಹನ ಅಪಘಾತಕ್ಕೀಡಾದ ಘಟನೆ ಆಂಧ್ರ ಪ್ರದೇಶದ ಮಣೂರು ಬಳಿ ಘಟನೆ ನಡೆದಿದೆ.
ಕ್ರೈಂ ಸಿಬ್ಬಂದಿ ಪ್ರಕಾಶ್, ಮುದ್ದರಾಜು ಹಾಗೂ ರಮೇಶ್ಗೆ ಗಂಭೀರ ಗಾಯಗಳಾಗಿದ್ದು, ನಿನ್ನೆ ಮಧುಗಿರಿ ಪಟ್ಟಣದಲ್ಲಿ ಮಹಿಳೆಯನ್ನ ಯಮಾರಿಸಿ 70 ಗ್ರಾಂ ಚಿನ್ನದ ಸರ ಕದ್ದು ಖದೀಮನೊಬ್ಬ ಎಸ್ಕೇಪ್ ಆಗಿದ್ದ. ಪ್ರಕರಣ ಸಂಬಂಧ ಮಧುಗಿರಿ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದರು.
Health Tips: ಸೀಮೆ ಬದನೆಕಾಯಿ ಸೇವನೆಯ ಆರೋಗ್ಯಕರ ಪ್ರಯೋಜನಗಳೇನು ಗೊತ್ತಾ..?
ಕಳ್ಳನ ಜಾಡು ಹಿಡಿದು ಹೊರಟಿದ್ದ ಮಧುಗಿರಿ ಪೊಲೀಸರು ಕಳ್ಳನನ್ನು ಹಿಡಿಯುವ ಭರದಲ್ಲಿ ವೇಗವಾಗಿ ಕಾರಿನಲ್ಲಿ ತೆರಳುತ್ತಿದ್ದಾಗ, ಸ್ಟೇರಿಂಗ್ ಲಾಕ್ ಆಗಿ ಪಲ್ಟಿ ಹೊಡೆದಿದೆ. ಪರಿಣಾಮ ಪೊಲೀಸ್ ಸಿಬ್ಬಂದಿಯ ಕಣ್ಣು, ತಲೆ, ಕೈ, ಕಾಲುಗಳಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಗೆ ಆಂಧ್ರದ ಧರ್ಮವರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಧರ್ಮವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.