ಬಾದಾಮಿಯು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಸಹಾಯಕವಾಗಿದೆ. ಆದರೆ ಯಾವುದನ್ನಾದರೂ ಅಧಿಕಗೊಳಿಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಬಾದಾಮಿ ತಿನ್ನುವ ಮೂಲಕ ಆರೋಗ್ಯವನ್ನು ಬಲಪಡಿಸಲು ಬಯಸಿದರೆ, ಸರಿಯಾದ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಇದಲ್ಲದೆ ಈ ಒಣ ಹಣ್ಣನ್ನು ಸೇವಿಸಲು ಉತ್ತಮ ಸಮಯದ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು.
Pumpkin Seeds: ಕುಂಬಳಕಾಯಿ ಬೀಜ ತಿಂದ್ರೆ ಈ ಆರೋಗ್ಯ ಸಮಸ್ಯೆಗಳು ಹತ್ತಿರವೂ ಸುಳಿಯಲ್ಲ!
ಬಾದಾಮಿಗಳು ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ ಮತ್ತು ಫೈಬರ್ನಲ್ಲಿ ಸಮೃದ್ಧವಾಗಿದೆ. ಇದು ಮೆದುಳು ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಇವುಗಳನ್ನು ತಿನ್ನುವುದರಿಂದ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತ ಕಡಿಮೆಯಾಗುತ್ತದೆ.
ಆದರೆ, ಪ್ರತಿದಿನ ಬಾದಾಮಿ ತಿನ್ನುವುದು ಎಷ್ಟು ಮುಖ್ಯವೋ, ಅವುಗಳನ್ನು ಮಿತಿಗೊಳಿಸುವುದು ಕೂಡ ಅಷ್ಟೇ ಮುಖ್ಯ. ಏಕೆಂದರೆ ಬಾದಾಮಿಯನ್ನು ಅತಿಯಾಗಿ ತಿಂದರೆ ಕಿಡ್ನಿ ಸ್ಟೋನ್ಸ್ ಸಮಸ್ಯೆ, ಜೀರ್ಣಕ್ರಿಯೆ ಮತ್ತು ಬೊಜ್ಜಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹಾಗಾದ್ರೆ ಪ್ರತಿದಿನ ಎಷ್ಟು ಬಾದಾಮಿ ತಿನ್ನಬೇಕು? ಅಲ್ಲದೇ, ಯಾವ ರೀತಿಯ ಆಹಾರಗಳು ಕಿಡ್ನಿ ಸ್ಟೋನ್ ಸಮಸ್ಯೆಗೆ ಕಾರಣವಾಗಬಹುದು? ಹೀಗೆ ಮುಂತಾದ ವಿಚಾರಗಳನ್ನು ತಿಳಿದುಕೊಳ್ಳೋಣ ಬನ್ನಿ.
ಬಾದಾಮಿಯಲ್ಲಿ ಪೌಷ್ಠಿಕಾಂಶದ ಮೌಲ್ಯಗಳು: 23 ಮಧ್ಯಮ ಗಾತ್ರದ ಬಾದಾಮಿಗಳನ್ನು ತಿನ್ನುವುದರಿಂದ 160 ಕ್ಯಾಲೋರಿಗಳು, 14 ಗ್ರಾಂ ಆರೋಗ್ಯಕರ ಕೊಬ್ಬುಗಳು, 6 ಗ್ರಾಂ ಪ್ರೋಟೀನ್, 6 ಗ್ರಾಂ ಕಾರ್ಬೋಹೈಡ್ರೇಟ್ಗಳು, 3.5 ಗ್ರಾಂ ಫೈಬರ್, 7.3 ಮಿಲಿಗ್ರಾಂ ವಿಟಮಿನ್ ಇ (ದೈನಂದಿನ ಮೌಲ್ಯದ 37 ಪ್ರತಿಶತದಷ್ಟು. ), 76 ಮಿಲಿಗ್ರಾಂ ಮೆಗ್ನೀಸಿಯಮ್ (19 ಪ್ರತಿಶತ), 76 ಮಿಲಿಗ್ರಾಂ ಕ್ಯಾಲ್ಸಿಯಂ (7 ಪ್ರತಿಶತ), ಸುಮಾರು 600 ಮಿಲಿಗ್ರಾಂ ಕಬ್ಬಿಣಾಂಶವನ್ನು ಪಡೆಯುತ್ತೀರಿ ಎಂದು ಆಹಾರ ತಜ್ಞರು ಹೇಳುತ್ತಾರೆ. ಆದ್ದರಿಂದ, ಇವುಗಳನ್ನು ಮಿತವಾಗಿ ತಿನ್ನುವುದು ಉತ್ತಮ ಎನ್ನಲಾಗಿದೆ.
ಯಾರು ಎಷ್ಟು ಬಾದಾಮಿ ತಿನ್ನಬಹುದು?: ವಯಸ್ಕರು ದಿನಕ್ಕೆ 20 ರಿಂದ 25 ಬಾದಾಮಿಗಳನ್ನು ಸೇವಿಸಿದರೆ ಆರೋಗ್ಯವಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ಮಕ್ಕಳು ದಿನಕ್ಕೆ 10 ಕ್ಕಿಂತ ಹೆಚ್ಚು ತಿನ್ನಬಾರದು ಎಂದು ಸೂಚಿಸಲಾಗುತ್ತದೆ.
ಆದರೆ, ಈ ಮಿತಿಯು ವ್ಯಕ್ತಿಯ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯ ಸ್ಥಿತಿಯನ್ನು ಅವಲಂಬಿಸಿ ಬದಲಾಗುತ್ತಿರುತ್ತದೆ. ಆದ್ದರಿಂದ, ಬಾದಾಮಿ ಸೇವಿಸುವ ಮುನ್ನ ಫುಡ್ ಪ್ಲ್ಯಾನಿಂಗ್ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇರಬೇಕಾಗಿರುವುದರಿಂದ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಬಾದಾಮಿಯಿಂದ ಕಿಡ್ನಿ ಸ್ಟೋನ್ ಹೇಗೆ ಬರುತ್ತೆ?: ಹೆಚ್ಚು ಬಾದಾಮಿ ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳು ಉಂಟಾಗಬಹುದು. ಅದಕ್ಕಿಂತ ಮುಖ್ಯವಾಗಿ ಕಿಡ್ನಿ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರು ಮತ್ತು ಈಗಾಗಲೇ ಕಿಡ್ನಿ ಸ್ಟೋನ್ ಹೊಂದಿರುವವರು ಅವುಗಳನ್ನು ಸೀಮಿತ ರೀತಿಯಲ್ಲಿ ಸೇವಿಸಬೇಕು
ಏಕೆಂದರೆ ಬಾದಾಮಿಯಲ್ಲಿ ಆಕ್ಸಲೇಟ್ ಇರುತ್ತದೆ. ಜೊತೆಗೆ ಕ್ಯಾಲ್ಸಿಯಂ ಕೂಡ ಇರುತ್ತದೆ. ಮೂತ್ರದಲ್ಲಿ ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಇರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಇಂತಹವರು ಬಾದಾಮಿ ತಿನ್ನುವ ಮುನ್ನ ವೈದ್ಯರ ಸಲಹೆ ಪಡೆಯಬೇಕು.
ಬಾದಾಮಿಯೊಂದಿಗೆ ಈ ಆಹಾರಗಳು ಸಹ ಕಿಡ್ನಿ ಸ್ಟೋನ್ಗೆ ಕಾರಣ: ಬಾದಾಮಿ, ಸೋಯಾ ಉತ್ಪನ್ನಗಳು, ಓಟ್ಸ್, ಓಟ್ ಹೊಟ್ಟು, ಕೆಂಪು ಮಸೂರ, ನೇವಿ ಬೀನ್ಸ್, ಫಾವಾ ಬೀನ್ಸ್, ಲೆಟಿಸ್, ಟೊಮೆಟೊ, ಬೀಟ್ರೂಟ್ ಕೂಡ ಕಿಡ್ನಿ ಸ್ಟೋನ್ ಅಪಾಯವನ್ನು ಹೆಚ್ಚಿಸುತ್ತದೆ.
ಈ ಆಹಾರಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದ್ದರೂ, ಇವುಗಳನ್ನು ಅತಿಯಾಗಿ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಸಮತೋಲಿತ ಆಹಾರದೊಂದಿಗೆ ಮಾತ್ರ ಇವುಗಳನ್ನು ತಿನ್ನಲು ಪ್ರಯತ್ನಿಸಿ.
ಅಲ್ಲದೇ ದಿನಕ್ಕೆ ಕನಿಷ್ಠ ಎರಡೂವರೆ ಲೀಟರ್ ನೀರು ಕುಡಿದರೆ ಕಿಡ್ನಿ ಸ್ಟೋನ್ ಸಮಸ್ಯೆ ಬರುವುದಿಲ್ಲ ಎನ್ನುತ್ತಾರೆ ತಜ್ಞರು