ನವದೆಹಲಿ:- ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಉತ್ತರ ಭಾರತದಲ್ಲಿ ಮತಬೇಟೆ ಆರಂಭಿಸಿರುವ ಪ್ರಧಾನಿ ಮೋದಿ ಕೆಲವೇ ದಿನಗಳಲ್ಲಿ ದಕ್ಷಿಣದ ರಾಜ್ಯಗಳಿಗೆ ಬರಲಿದ್ದಾರೆ. ಮಾರ್ಚ್ 15ರಿಂದ 19ರವರೆಗೆ ದಕ್ಷಿಣ ಭಾರತದಲ್ಲಿ ಮೋದಿ ಅವರ 15 ಱಲಿ ಹಾಗೂ ಸಾರ್ವಜನಿಕ ಸಭೆಗಳು ನಿಗದಿಯಾಗಿವೆ
ಮೋದಿ ದಕ್ಷಿಣ ಭಾರತ ಪ್ರವಾಸ ವೇಳಾಪಟ್ಟಿ
ಮಾರ್ಚ್ 15 : ಕೋಲಾರ, ಸೇಲಂ, ಪಾಲಕ್ಕಾಡ್
ಮಾರ್ಚ್ 16 : ಕನ್ಯಾಕುಮಾರಿ, ವಿಶಾಖಪಟ್ಟಣಂ, ಜಹೀರಾಬಾದ್
ಮಾರ್ಚ್ 17 : ಪತ್ತನಂತ್ತಿಟ್ಟ, ಶಿವಮೊಗ್ಗ, ಅಮರಾವತಿ
ಮಾರ್ಚ್ 18 : ಮಲ್ಕಾಜ್ಗಿರಿ, ಬೀದರ್, ಕೊಯಮತ್ತೂರು
ಮಾರ್ಚ್ 19: ನಾಗರ್ ಕರ್ನೂಲ್, ಧಾರವಾಡ, ಏಲೂರು
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರಧಾನಿ ಮೋದಿ ರೋಡ್ ಶೋ, ಸಮಾವೇಶಕ್ಕೆ ಯೋಜನೆ ರೂಪಿಸಲಾಗಿದೆ. ಮಾರ್ಚ್ 17ರಂದು ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಱಲಿ ನಡೆಯಲಿದೆ. ಶಿವಮೊಗ್ಗದಲ್ಲಿ 4 ಕ್ಷೇತ್ರಗಳನ್ನೊಳಗೊಂಡ ಸಮಾವೇಶ ಆಯೋಜಿಸಲಾಗಿದ್ದು, ಒಟ್ಟಾರೆಯಾಗಿ ರಾಜ್ಯದಲ್ಲಿ 4 ಸಾರ್ವಜನಿಕ ಱಲಿ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಮೋದಿ ಸಮಾವೇಶಕ್ಕೆ ಸಿದ್ಧತೆ ಮಾಡಲಾಗುತ್ತಿದೆ.