ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ಧಾಮದಲ್ಲಿ ಕೆಲಸ ಮಾಡುವವರಿಗೆ 100 ಜೋಡಿ ಸೆಣಬಿನ ಪಾದರಕ್ಷೆಗಳನ್ನು ಕಳುಹಿಸಿದ್ದಾರೆ. ವಾರಣಾಸಿಯಲ್ಲಿ ₹339 ಕೋಟಿ ಮೌಲ್ಯದ ನವೀಕರಣ ಯೋಜನೆಯನ್ನು ಕಳೆದ ವರ್ಷದ ಡಿಸೆಂಬರ್ 13ರಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಕಾಶಿ ವಿಶ್ವನಾಥ ಧಾಮದಲ್ಲಿ ಕೆಲಸ ಮಾಡುವ ಹೆಚ್ಚಿನ ಜನರು ತಮ್ಮ ಕರ್ತವ್ಯವನ್ನು ಬರಿಗಾಲಿನಲ್ಲಿ ನಿರ್ವಹಿಸುತ್ತಾರೆ ಎಂದು ಪಿಎಂ ಮೋದಿಗೆ ಇತ್ತೀಚೆಗೆ ಗೊತ್ತಾಯಿತು.
ಕಾಶಿ ವಿಶ್ವನಾಥ ದೇವಾಲಯದ ಆವರಣದಲ್ಲಿ ಚರ್ಮ ಅಥವಾ ರಬ್ಬರ್‌ನಿಂದ ಮಾಡಿದ ಪಾದರಕ್ಷೆ ಧರಿಸುವುದನ್ನು ನಿಷೇಧಿಸಲಾಗಿದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ 100 ಜೋಡಿ ಸೆಣಬಿನ ಪಾದರಕ್ಷೆಗಳನ್ನು ಖರೀದಿಸಿ ಕಾಶಿ ವಿಶ್ವನಾಥ ಧಾಮಕ್ಕೆ ಕಳುಹಿಸಿದ್ದಾರೆ. ಇವರಲ್ಲಿ ಅರ್ಚಕರು, ಸೇವೆ ಮಾಡುವ ಜನರು, ಭದ್ರತಾ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು ಮತ್ತು ಇತರರು ಸೇರಿದ್ದಾರೆ.
