ಊಟ ಆದ ನಂತರ ನಾವು ಅಡಿಕೆ ತಿನ್ನುವ ಪದ್ದತಿ ನಮ್ಮಲ್ಲಿದೆ. ಕೆಲವರು ಊಟದ ನಂತರ ಸೋಂಪು ತಿನ್ನುತ್ತಾರೆ. ಈ ಸೋಂಪು ಮೌತ್ ಫ್ರೆಶ್ನರ್ ಆಗಿಯೂ ಕೆಲಸ ಮಾಡುತ್ತದೆ. ಇದು ಅನೇಕ ಪೋಷಕಾಂಶಗಳನ್ನು ಹೊಂದಿದ್ದು, ಇದರಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಪೋಷಕಾಂಶಗಳಿವೆ. ಹಾಗೆಯೇ, ಇದನ್ನು ಅತಿಯಾಗಿ ಸೇವಿಸುವುದರಿಂದ ಆಗುವ ದುಷ್ಪರಿಣಾಮಗಳು ಬಹಳಷ್ಟು.
ಗರ್ಭಿಣಿಯರು ಸೋಂಪುಕಾಳನ್ನು ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದನ್ನು ತಪ್ಪಿಸಬೇಕು ಏಕೆಂದರೆ, ಇದು ಗರ್ಭಾಶಯದ ಸಂಕೋಚನವನ್ನು ಉಂಟುಮಾಡಬಹುದು ಮತ್ತು ಅಕಾಲಿಕ ಹೆರಿಗೆಗೆ ಕಾರಣವಾಗುತ್ತದೆ.
ಉಸಿರಾಟದ ತೊಂದರೆ ಇರುವವರು ಸೋಫುಕಾಳನ್ನು ಬಳಸಬಹುದು, ಇದು ಪ್ರಯೋಜನಕಾರಿ ಕೂಡ. ಆದರೆ ಕೆಲವರಿಗೆ ಇದು ಅಲರ್ಜಿ ಉಂಟು ಮಾಡುತ್ತದೆ. ಆದ್ದರಿಂದ ಅವುಗಳನ್ನು ಯಾವಾಗಲೂ ಮಿತವಾಗಿ ಬಳಸಿ.
ಇನ್ನೂ ಕೆಲವರು ಸೋಂಪುಕಾಳನ್ನು ತಿನ್ನುವುದರಿಂದ ಕಾಂಟ್ಯಾಕ್ಟ್ ಡರ್ಮಟೈಟಿಸ್, ಚರ್ಮದ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಚರ್ಮದ ಉರಿಯೂತ ಮತ್ತು ಗುಳ್ಳೆಗಳು ಉಂಟಾಗಬಹುದು.ಅತಿಯಾದ ಸೇವನೆಯಿಂದ ಈ ಅಲರ್ಜಿ ಆಗುತ್ತದೆ.
ನೀವು ಈಗಾಗಲೇ ಅಪಸ್ಮಾರ ಮತ್ತು ನರಗಳ ಸಮಸ್ಯೆಗಳಿಗೆ ಕೆಲವು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಸೋಂಪುಕಾಳನ್ನು ತಿನ್ನಬೇಡಿ ಎಂದು ಹೇಳಲಾಗುತ್ತದೆ. ಏಕೆಂದರೆ ಈ ಕಾಳುಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಕಿಡ್ನಿ ಡ್ಯಾಮೇಜ್ ಆಗಿರುವವರು, ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದವರು ಆಹಾರದಲ್ಲಿ ಮಾತ್ರ ಸೋಂಪು ಬಳಸಿದರೆ ಸಮಸ್ಯೆಯಾಗುವುದಿಲ್ಲ. ಆದರೆ ಹೆಚ್ಚು ಸೋಂಪು ಸೇವಿಸುವುದರಿಂದ ಕಿಡ್ನಿ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಈ ಸೋಂಪುಕಾಳು ಹಲ್ಲಿನ ಮೇಲೆ ರೋಗಾಣುಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ.ಹಾಗಾಗಿ ಮಿತಿಯಿಂದ ಇದನ್ನು ಸೇವನೆ ಮಾಡುವುದು ಯಾವುದೇ ಸಮಸ್ಯೆ ಬರದಂತೆ ತಡೆಯುತ್ತದೆ.