ಬೆಳಗಾವಿ: ಗ್ಯಾರಂಟಿ ಯೋಜನೆ ಜಾರಿಗೆ ವಿಳಂಬ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ(Sasikala Jolle) ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದ ಹೆಣ್ಣು ಮಕ್ಕಳು ಗ್ಯಾರಂಟಿ ಯೋಜನೆ ನಂಬಿಕೊಂಡು ಕೂತಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಅದು ಜಾರಿ ಆಗದೇ, ಅದಕ್ಕೆ ಬರುವ ಸಮಸ್ಯೆ ನೋಡಿ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ.
Free Devara Darshana: ವೃದ್ಧರಿಗೆ ದೇಗುಲಗಳಲ್ಲಿ ಫ್ರೀ ವ್ಯವಸ್ಥೆ ಸದ್ಯದಲ್ಲೇ ಜಾರಿ : ಸಚಿವ ರಾಮಲಿಂಗಾರೆಡ್ಡಿ
ಜನರಿಗೆ ಗ್ಯಾರಂಟಿ ಯೋಜನೆ ಸಿಗುತ್ತದೆಯೂ, ಇಲ್ಲೋ ಎಂಬ ಬಗ್ಗೆ ನಾನು ಮಾತಾಡೊದ್ಕಿಂತ ಸುಮ್ಮನೆ ಕುಳಿತು ನೋಡೊ ಕೆಲಸ ಮಾಡ್ತೀವಿ. ವೇಟ್ ಆ್ಯಂಡ್ ವಾಚ್ ಮಾಡಿ ಆಮೇಲೆ ಮಾತನಾಡುತ್ತೇವೆ ಎನ್ನುವ ಮೂಲಕ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ಕಾಂಗ್ರೆಸ್ಗೆ ವಾರ್ನಿಂಗ್ ಕೊಟ್ಟಿದ್ದಾರೆ.
