ಬೆಂಗಳೂರು: ರೂಪಾಂತರಿ ಓಮಿಕ್ರಾನ್ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಗಮನಹರಿಸಬೇಕು ಎಂದು ಹೇಳಿದರು.
ಅಲ್ಲದೇ ಈ ಮಹಾಮಾರಿ ಕಾಯಿಲೆಯಿಂದ ರಾಜ್ಯದ ಜನತೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಸಾಮಾಜಿಕ ಮಕ್ಕಳ ವಿದ್ಯಾಭ್ಯಾಸ ಬಹಳ ಎಫೆಕ್ಟ್ ಆಗಿದೆ. ಹೊಸ ಕಾಯಿಲೆ ಕೂಡ ದೂರ ಹೋಗಬೇಕು. ಇನ್ನೂ ಏರ್ಪೋರ್ಟ್ನಿಂದ ಬಂದವರಿಗೆ ದೊಡ್ಡ ದಂಧೆ ನಡೆಯುತ್ತಿದ್ದು, ನೆಗಡಿ ಬಂದವರಿಗೆ ಪಾಸಿಟಿವ್ ಕೊಡುತ್ತಿದ್ದಾರೆ. ಸಿಎಂ ಈ ಬಗ್ಗೆ ಗಮನ ಹರಿಸಬೇಕು ಎಂದು ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

