ಬೆಂಗಳೂರು: ಇಡೀ ರಾಜ್ಯದ ಜನ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಇದು ಭಿಕ್ಷುಕ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದ ಜನರ ಮೇಲೆ ಸರ್ಕಾರ ಎಲ್ಲಾ ತೆರಿಗೆ ಹಾಕ್ತಿದೆ. ಇಡೀ ರಾಜ್ಯದ ಜನ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಇದು ಭಿಕ್ಷುಕ ಸರ್ಕಾರ ಎಂದು ಟೀಕಿಸಿದ್ದಾರೆ.
ಇ-ಖಾತಾದ ವಿಚಾರವಾಗಿ ಪ್ರತಿಕ್ರಿಯಿಸಿ, ಅದರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಒಂದು ಇ ಖಾತಾಗೆ 12 ಸಾವಿರ ರೂ. ಕೊಡಬೇಕಾಗಿದೆ. ಬೆಂಗಳೂರು ಪಾರ್ಕ್ಗಳಲ್ಲಿ ನಂಬರ್ ಹಾಕಲಾಗಿದೆ. ಇದು ಏಜೆಂಟ್ಗಳ ಕಾರುಬಾರು. ಇವರ ಮೇಲೆ ಕ್ರಮ ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ನೀರು ಬಿಟ್ಟ ವಿಚಾರವನ್ನು ಎಂ.ಬಿ ಪಾಟೀಲ್ ಅವರ ಬಳಿ ಕೇಳಿದ್ರೆ ನನಗೆ ಮಾಹಿತಿಯೇ ಇಲ್ಲ ಎನ್ನುತ್ತಾರೆ. ಹೆಚ್ಚು ನೀರಿದ್ದು, ಅದನ್ನು ಬಿಟ್ಟರೆ ಏನು ತಪ್ಪು ಎಂದು ಡಿಕೆಶಿ ಹೇಳ್ತಾರೆ. ನೀರಿನ ವಿಚಾರವಾಗಿ ಅವರ ಸ್ನೇಹಿತರಾದ ತಮಿಳುನಾಡಿನವರನ್ನು ಡಿಕೆಶಿ ಕೇಳಲಿ. ಬರಗಾಲದಲ್ಲಿ ರಾಜ್ಯದ ಜನರಿಗೆ ಅಪಾಯವಾದರೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದ್ದಾರೆ.