ಹುಬ್ಬಳ್ಳಿ : ವಿಧಾನ ಸಭಾ ಚುನಾವಣಾ ಫಲಿತಾಂಶದಲ್ಲಿ ಭಾರತೀಯ ಜನತಾ ಪಕ್ಷದ ಪರವಾಗಿ ಫಲಿತಾಂಶ ಬರಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾದ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರ ದೆಹಲಿ ಮತದಾರರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಅವರ ಆಡಳಿತ ಕ್ಕೆ ಪ್ರಾಶಸ್ತ್ಯ ಕೊಟ್ಟಿದ್ದಾರೆ. ಒಂದು ಒಳ್ಳೆಯ ಆಡಳಿತ ಮಾಡಲು ಜನರು ಅವಕಾಶ ಕೊಟ್ಟರೆ, ಅದನ್ನು ದುರುಪಯೋಗ ಮಾಡಿಕೊಂಡು ಬಂದ ಆಮ್ ಆದ್ಮಿ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸಿದ್ದ . ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡು ಬಂದಿತು ಇದಕ್ಕೆ ದೆಹಲಿ ಮತದಾರರು ಒಳ್ಳೆಯ ಪಾಠ ಹೇಳಿಕೊಟ್ಟಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರು.
ದಿಲ್ಲಿ ಜನರ ಆರ್ಶೀವಾದ ಬಿಜೆಪಿಗೆ ಸಿಕ್ಕಿದೆ, ಕೇಜ್ರಿವಾಲ್ ಕ್ರೇಜ್ ಹೋಗಿದೆ: ಶೆಟ್ಟರ್!
ಇನ್ನು ಕಾಂಗ್ರೆಸ್ ದಿನದಿಂದ ದಿನಕ್ಕೆ ನಶಿಸಿ ಹೋಗತಾ ಇದೆ. ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎನ್ನುವುದುಕ್ಕೆ ಇದೇ ಉದಾಹರಣೆ ಆಗಿದೆ . ಇಂದು ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಿದ್ದು ಆದ್ದರಿಂದ ಇಂದು ಕಾಂಗ್ರೆಸ್ ದಹನೀಯ ಸ್ಥಿತಿಗೆ ತಲುಪಿದೆ ಎಂದರು.