ಬೆಂಗಳೂರು:- ಜನರಿಗೆ ಸುಳ್ಳು ಬಹಳ ಇಂಪಾಗಿ ಕೇಳುತ್ತೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಜನಕ್ಕೆ ಸುಳ್ಳು ಬಹಳ ಇಂಪಾಗಿ ಕೇಳುತ್ತೆದೆ. ಆದ್ದರಿಂದ ಜನ ಅದೇ ರೀತಿ ಯಾಮಾರುತ್ತಾ ಇದ್ದಾರೆ. ಇನ್ನು ಕರ್ನಾಟಕ ಮತ್ತು ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆಯಿತ್ತು. ಈ ಎರಡು ರಾಜ್ಯಗಳಲ್ಲಿ ನಾವು ಗ್ಯಾರಂಟಿ ಘೋಷಣೆ ಮಾಡದಿದ್ದರೂ ಗೆಲುವು ಸಾಧಿಸುತ್ತಿದ್ದೆವು ಎಂದರು.
ಪಂಚರಾಜ್ಯ ಚುನಾವಣೆಯಲ್ಲಿ ನಮಗೆ ಹಿನ್ನೆಡೆ ಎಂದು ಹೇಳೋದಿಲ್ಲ ನಾವು ಜಾರ್ಖಂಡ್ ಸಹ ಗೆಲ್ಲತ್ತೇವೆ ಎಂದು ಕೊಡಿದ್ದೆವು. ಅದು ಅನಿರೀಕ್ಷಿತ ನಮಗೆ ರಾಜಸ್ಥಾನದಲ್ಲಿ ನಮ್ಮಲ್ಲೆ ಆಂತರಿಕ ಕಿತ್ತಟಾ ಬಹಳಷ್ಟು ಇತ್ತು. ಹಾಗಾಗಿ ನಮ್ಗೆ ಗೆಲ್ಲವಂತಹ ವಿಶ್ವಾಸ ಇರಲಿಲ್ಲ. ದೇಶದಲ್ಲಿ ಆಡಳಿತ ಪಕ್ಷ ಇರುವಂತಹ ಬಿಜೆಪಿ ಬಹಳ ಸಂಪನ್ಮೂಲ ಹೊಂದಿದ್ದಾರೆ. ಸುಳ್ಳು ಸಹ ಬಹಳ ಚನ್ನಾಗಿ ಹೇಳುತ್ತಾರೆ ಬಿಜೆಪಿ ಅವ್ರು ಅದನ್ನು ಜನ ನಂಬಿದ್ದಾರೆ. ಜನಕ್ಕೆ ತಲೆಗೆ ಹತ್ತೋ ರೀತಿ ಸುಳ್ಳು ಹೇಳಿ ಹೇಳಿ 9 ವರ್ಷದಿಂದ ಚುನಾವಣೆ ಗೆಲುತ್ತಾ ಇದ್ದಾರೆ. ಜನಕ್ಕೆ ಸುಳ್ಳು ಬಹಳ ಇಂಪಾಗಿ ಕೇಳುತ್ತೆ ಜನ ಅದೇ ರೀತಿ ಯಾಮಾರುತ್ತಾ ಇದ್ದಾರೆ ಎಂದು ಹೇಳಿದರು.