ಬೆಂಗಳೂರು: ನಾವು ಸರಿಯಾಗಿ ಅಧಿಕಾರ ಮಾಡದಿದ್ದಕ್ಕೆ ಜನರು ನಮ್ಮನ್ನು ಸೋಲಿಸಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಪಕ್ಷದ ವಿರುದ್ಧವೇ ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ, ಎಲ್ಲರಿಗೂ ಒಂದೊಂದು ಕಾಲ ಇರುತ್ತದೆ. ನಾವು ಸರಿಯಾಗಿ ಅಧಿಕಾರ ಮಾಡದಿದ್ದಕ್ಕೆ ಜನರು ನಮ್ಮನ್ನು ಸೋಲಿಸಿದರು. ಆ ಸೋಲನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಆಡಳಿತದ ಬಗ್ಗೆ ಡಿಕೆಶಿ ಅಚ್ಚರಿ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.
