ಬೆಂಗಳೂರು:– ಗ್ರಾಹಕರೇ ಎಚ್ಚರ! ರಾಜ್ಯದಲ್ಲಿ ಪೂರೈಕೆಯಾಗುವ ಹಾಲಿನಲ್ಲಿ ವಿಷಕಾರಿ ರಾಸಾಯನಿಕಗಳು ಪತ್ತೆ ಆಗುತ್ತಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಹಾಲಿನ ಗುಣಮಟ್ಟದ ಬಗ್ಗೆ ಆರೋಪಗಳು ಕೇಳಿ ಬಂದಿದ್ವು. ಈ ಹಿನ್ನೆಲೆ 31 ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ 44 ಬ್ರ್ಯಾಂಡ್ಗಳ 259 ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟ ಪರೀಕ್ಷೆಗಾಗಿ ಕೆಎಂಎಫ್ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಈ ಎಲ್ಲಾ ಮಾದರಿಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದ್ದು, ಫಲಿತಾಂಶ ಆತಂಕಕಾರಿಯಾಗಿದೆ. 259 ಮಾದರಿಗಳಲ್ಲಿ ಮೂರು ಮಾದರಿಗಳು ಕಲಬೆರಕೆಯಾಗಿವೆ.
98 ಮಾದರಿಗಳ ಹಾಲಿನ ಗುಣಮಟ್ಟ ಕಳಪೆಯಾಗಿದೆ. 9 ಮಾದರಿಗಳು ಕಲಬೆರಕೆಯಾಗಿದ್ದು, ಗುಣಮಟ್ಟ ಕಳಪೆಯಾಗಿದೆ. 110 ಮಾದರಿಗಳ ಗುಣಮಟ್ಟ ಫುಡ್ ಸೇಫ್ಟಿ ಆಯಂಡ್ ಸ್ಟ್ಯಾಂಡರ್ಡ್ ರೆಗ್ಯುಲೇಷನ್ (FSSR) ಆಯಕ್ಟ್ನ ಮಾನದಂಡಕ್ಕೆ ಅನುಗುಣವಾಗಿಲ್ಲ. 149 ಮಾದರಿಗಳ ಗುಣಮಟ್ಟ ಮಾತ್ರ FSSRನ ಮಾನದಂಡಕ್ಕೆ ಅನುಗುಣವಾಗಿದೆ ಅಂತ FSSAI ತಿಳಿಸಿದೆ. ಇತ್ತ ನಂದಿನಿ ಬ್ರ್ಯಾಂಡ್ನ ಹಾಲು ಗುಣಮಟ್ಟದಿಂದ ಕೂಡಿದೆ ಮತ್ತು FSSR ಮಾನದಂಡಕ್ಕೆ ಅನುಗುಣವಾಗಿದೆ ಹಾಗೂ ನಂದಿನಿ ಹಾಲಿನಲ್ಲಿ ಕಲಬೆರಕೆ ಅಂಶ ಪತ್ತೆಯಾಗಿಲ್ಲ