ಇತ್ತೀಚೆಗೆ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಸಂಬಂಧಿಸಿ ಡೀಪ್ ಫೇಕ್ ವಿಡಿಯೋಗಳು ಯೂಟ್ಯೂಬ್ ತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಯೂಟೂಬರ್ಗಳಿಗೆ, ಯೂಟ್ಯೂಬ್ ಕೆಲವು ನಿಯಮಗಳನ್ನು ಜಾರಿಗೆ ತರಲಿದ್ದು ದಂಡ ವಿಧಿಸುವ ಎಚ್ಚರಿಕೆ ನೀಡಿದೆ.
ಯೂಟ್ಯೂಬ್ ನಲ್ಲಿ ಬಳಕೆ ಮಾಡಲಾದ ವೀಡಿಯೋ ಮತ್ತು ಫೋಟೋಗಳನ್ನು ಕೃತಕ ಬುದ್ದಿಮತ್ತೆ (ಡೀಪ್ ಫೇಕ್) ನಿಂದ ತಯಾರಿಸಿದ್ದರೇ ಅಂತವುಗಳಿಗೆ ಡಿಸ್ಕ್ಲೇಮರ್ ಹಾಕುವುದು ಕಡ್ಡಾಯ ಎಂದು ಹೇಳಿದೆ. ಇಲ್ಲದಿದ್ದರೇ ದಂಡ ಹಾಕುವುದಾಗಿ ಎಚ್ಚರಿಕೆ ಎಂದು ಹೇಳಿದೆ.
ವೀಡಿಯೋಗಳ ದುರ್ಬಳಕೆಯಾಗುವ ಸಾಧ್ಯತೆ ಗಮದಲ್ಲಿಟ್ಟುಕೊಂಡು ಇಂಥದಕ್ಕೆ ಕಡಿವಾಣ ಹಾಕಲು ಸೂಚನೆ ನೀಡಿದೆ. ಒಂದು ವೇಳೆ ಎಐ ಬಳಸಿದ್ದರೂ ಅದನ್ನು ಬಹಿರಂಗಪಡಿಸದಿದ್ದರೇ ಅಂತಹ ವೀಡಿಯೋಗಳನ್ನು ಡಿಲೀಟ್ ಮಾಡಿ ದಂಡವನ್ನು ವಿಧಿಸಲಾಗುವುದು ಎಂದು ಎಚ್ಚರಿಸಿದೆ. ಈ ನಿಯಮಗಳು 2024 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.