ಬೆಂಗಳೂರು: ಬೆಂಗಳೂರು ನಗರದಿಂದ ಬರೋಬ್ಬರಿ 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಪೀಣ್ಯ ಫ್ಲೈಓವರ್ 3 ದಿನಗಳ ಕಾಲ ಬಂದ್ ಹಿನ್ನೆಲೆಯಲ್ಲಿ ಇಂದು ತುಮಕೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಕಂಡುಬಂದಿದೆ.
ಪೀಣ್ಯ ಫ್ಲೈಓವರ್ 3 ದಿನಗಳ ಕಾಲ ಬಂದ್ ಹಿನ್ನೆಯಲ್ಲಿ ಕಿಲೋಮೀಟರ್ ವರೆಗೂ ಟ್ರಾಫಿಕ್ ಜಾಂ ವಾಹನ ಸವಾರರು ಪರದಾಡುತ್ತಿದ್ದು ಮೂರು ದಿನಗಳ ಕಾಲ ಮೆಲ್ಸೇತುವೆ ದುರಸ್ಥಿಗಾಗಿ ಪ್ಲೈ ಓವರ್ ಬಂದ್ ಮಾಡಿರುವ ಹೆದ್ದಾರಿ ಪ್ರಾಧಿಕಾರ
ಬೆಂಗಳೂರಿಗೆ ಎಂಟ್ರಿ ಕೊಡುವ ಸ್ಥಳದಲ್ಲೇ ಹೆವಿ ಟ್ರಾಫಿಕ್ ಜಾಂ ಆಗಿದ್ದು 8 ನೇ ಮೈಲಿ, ಜಾಲಹಳ್ಳಿ ಕ್ರಾಸ್ ,ಪೀಣ್ಯ ಮೂಲಕ ಗೊರಗುಂಟೆ ಪಾಳ್ಯ ತಲುಪಲು ಹರಸಾಹಸ ಪಡುತ್ತಿದ್ದು ಅರ್ಧಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ನಲ್ಲಿ ನಿಂತು ವಾಹನ ಸವಾರರು ಹೈರಾಣ