ಇಂದಿನ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಖಾಯಿಲೆ PCOS. ಈ ಸಮಸ್ಯೆಯ ಬಗ್ಗೆ ನೀವು ಹೆಚ್ಚು ಗಮನ ವಹಿಸದೇ, ನಿರ್ಲಕ್ಷಿಸಿದರೆ, ಇದು ನಿಮ್ಮನ್ನು ಡಿಪ್ರೆಶನ್ಗೆ ಕರೆದೊಯ್ಯುತ್ತದೆ.
ಮಹಿಳೆಯರೇ ಸ್ಪಲ್ಪ ಕೇರ್ ಲೆಸ್ ಮಾಡಿದ್ರು ತೀವ್ರವಾದ ಕಾಯಿಲೆಗೆ ತುತ್ತಾಗೋದು ಪಕ್ಕಾ. ಹೌದು, ಮಹಿಳೆಯರ ದೇಹವು ಜೀವಿತಾವಧಿಯಲ್ಲಿ ಅಸಂಖ್ಯಾತ ಬದಲಾವಣೆಗಳನ್ನು ಕಾಣುತ್ತದೆ. ಪ್ರೌಢಾವಸ್ಥೆಯನ್ನು ಋತುಸ್ರಾವದಿಂದ ಹಿಡಿದು ಗರ್ಭಧಾರಣೆಯನ್ನು ಅನುಭವಿಸುವವರೆಗೆ ಋತು ಬಂಧದ ಸ್ಥಿತಿ ತಲುಪುವವರೆಗೆ ಅನೇಕ ದೈಹಿಕ ಸವಾಲುಗಳನ್ನು ಎದುರಿಸಬೇಕಾಗುತ್ತೆ ಎಚ್ಚರ.
ಆತಂಕಕಾರಿ ಮಾಹಿತಿ: ಮಕ್ಕಳಲ್ಲಿ ಹೆಚ್ಚಾಯ್ತು ಹೃದಯ ಕಾಯಿಲೆ!
PCOS ಮತ್ತು PCOD ಕಾಯಿಲೆ ರೋಗಲಕ್ಷಣಗಳು..
– ಹೆಣ್ಣು ಮಕ್ಕಳ ಋತ್ತು ಚಕ್ರದಲ್ಲಿ ಏರುಪೇರು
– ಮುಖದ ಮೇಲೆ ಹೆಚ್ಚು ಮೊಡವೆ ಮತ್ತು ಕೂದಲು
– ತಲೆ ಕೂದಲು ಉದುರುವಿಕೆ
– ತೂಕದಲ್ಲಿ ಏರುಪೆರು
– ಮಾನಸಿಕ ಖಿನ್ನತೆ
ಮೊದಲನೇಯ ಕೆಲ ಕೆಟ್ಟ ಜೀವನಶೈಲಿ ಅನುಸರಿಸಬೇಡಿ. ಕೂತಲ್ಲೇ ಕುರುವುದು. ದೇಹವನ್ನು ದಂಡಿಸದೇ, ಸುಮ್ಮನೆ ಕುಳಿತುಕೊಳ್ಳುವುದು, ಬರೀ ಮೊಬೈಲ್ ನೋಡುವುದು. ಆಲಸ್ಯದ ಜೀವನ ಮಾಡುವುದೇ, ಕೆಟ್ಟ ಜೀವನಶೈಲಿ. ಇಂಥ ಜೀವನಶೈಲಿಯನ್ನು ಅನುಸರಿಸದೇ, ಮನೆಗೆಲಸ ಮಾಡಬೇಕು. ಅಥವಾ ವ್ಯಾಯಾಮ ಮಾಡಬೇಕು.
ಹೊತ್ತಿಗೆ ಸರಿಯಾಗಿ ಆರೋಗ್ಯಕರ ಆಹಾರ ಸೇವಿಸಿ. ಊಟ ತಿಂಡಿಯ ವಿಷಯದಲ್ಲಿ ನೀವು ಎಷ್ಟು ಕಾಳಜಿ ವಹಿಸುತ್ತೀರೋ ಅಷ್ಟು ಉತ್ತಮ. ಹೊತ್ತಿಗೆ ಸರಿಯಾಗಿ ತಿಂಡಿ, ಊಟ ಮಾಡಬೇಕು. ಬೀದಿ ಬದಿ ತಿಂಡಿ, ಬೇಕರಿ ತಿನಿಸು, ಸಕ್ಕರೆ ಪದಾರ್ಥ, ಕರಿದ ಪದಾರ್ಥಗಳು, ಮಸಾಲೆಭರಿತ ಪದಾರ್ಥ, ಹೆಚ್ಚು ಮಾಂಸಾಹಾರದ ಸೇವನೆ ಮಾಡಿದ್ದಲ್ಲಿ, ಪಿಸಿಓಎಸ್ ಸಮಸ್ಯೆ ಹೆಚ್ಚಾಗುತ್ತದೆ.
ಸರಿಯಾದ ಸಮಯಕ್ಕೆ ನಿದ್ರಿಸಬೇಕು. ರಾತ್ರಿ ಲೇಟಾಗಿ ಮಲಗುವುದು, ಮಲಗುವ ತನಕವೂ ಮೊಬೈಲ್ ನೋಡುವುದು. ಸರಿಯಾದ ಸಮಯಕ್ಕೆ ನಿದ್ರಿಸದೇ. ಸರಿಯಾದ ಸಮಯಕ್ಕೆ ಏಳದೇ, ಮನಬಂದಂತೆ ನಿದ್ರಿಸಿದರೆ, ಪಿಸಿಓಎಸ್ ಸಮಸ್ಯೆ ಹೆಚ್ಚಾಗುತ್ತದೆ. ಏಕೆಂದರೆ, ದೇಹಕ್ಕೆ ಒಂದೇ ರೀತಿಯ ಜೀವನಶೈಲಿಯ ಅಗತ್ಯವಿರುತ್ತದೆ. ಅದು ಅದೇ ರೀತಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಪ್ರತಿದಿನ ಬೇಗ ಮಲಗಿ, ಬೇಗ ಏಳಿ
PCOS ಮತ್ತು PCOD ಜೇವಿನ ಶೈಲಿಯ ಕಾಯಿಲೆ. ವರ್ಕ್ ಪ್ರೆಜರ್, ಕಡಿಮೆ ದೈಹಿಕ ಚಟುವಟಿಕೆ, ಜಂಗ್ ಫುಡ್ನಿಂದಾಗಿ PCOS ಮತ್ತು PCOD ಕಾಯಿಲೆಗೆ ಕಾರಣವಾಗ್ತಿದೆ. ಇನ್ನು, ಇದರಿಂದ ಪ್ರೆಗ್ನೆನ್ಸಿಯಲ್ಲಿ ತೊಂದರೆ, ಡಯಾಬಿಟಿಸ್ ಹಾಗೂ ಒಬೆಸಿಟಿ ಹೆಚ್ಚಳವಾಗ್ತಿದೆ.
ಹೆಚ್ಚು ಕಾಸ್ಮೆಟಿಕ್ಸ್, ಪ್ಲಾಸ್ಟಿಕ್ ಬಳಕೆ ಮಾಡಬಾರದು. ಮೇಕಪ್ ಮಾಡಿಕೊಂಡರೆ, ಅದನ್ನು ಕ್ಲೀನ್ ಆಗಿ ತೊಳೆದುಕೊಳ್ಳಬೇಕು. ಸುಮ್ಮನೆ ಮುಖ ತೊಳೆದು ಬಿಟ್ಟುಬಿಡಬಾರದು. ಲೋಶನ್ ಅಥವಾ ಎಣ್ಣೆಯಿಂದ ಪೂರ್ತಿ ಮೇಕಪ್ ಕ್ಲೀನ್ ಮಾಡಬೇಕು. ಪ್ಲಾಸ್ಟಿಕ್ ತಟ್ಟೆ, ಲೋಟ, ಬಾಟಲಿಗಳ ಬಳಕೆ ಮಾಡಬೇಡಿ.