ಬೆಳಗಾವಿ : ತಾಲೂಕಿನ ಬಸ್ತವಾಡ ಹಾಗೂ ಸವಸುದ್ದಿ ಗ್ರಾಮದಲ್ಲಿ 15ರಿಂದ16 ಅಡಿ ಅಗಲ ವಿರುವ ಪವನ್ ವಿದ್ಯುತ್ ಗಾಳಿ ಯಂತ್ರಗಳ ಕಂಬಗಳನ್ನು ರೈತರ ಫಲವತ್ತತೆಯ ಭೂಮಿಯಲ್ಲಿ ನಿಮಾರ್ಣನ ಮಾಡಿ ರೈತರ ಹೊಟ್ಟೆಯ ಮೇಲೆ ಹೊಡೆಯಲು ಹೊರಟ್ಟಿರುವ ಪವನ್ ವಿದ್ಯುತ್ ಗಾಳಿ ಯಂತ್ರದ ಕಂಪನಿಯವರು ಇಲ್ಲಿನ ರೈತರಿಗೆ ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಛೇರಿ ಎಂದರು ಪ್ರತಿಭಟನೆಯನ್ನು ನಡೆಸಿದರು. ಬಸ್ತವಾಡ ಹಾಗೂ ಸವಸುದ್ದಿ ಗ್ರಾಮದಲ್ಲಿನ, ಸುಮಾರು ಮೂವತ್ತು ಕುಟುಂಬಗಳ ಫಲವತ್ತಾದ ಭೂಮಿಯಲ್ಲಿ ಗಾಳಿ ವಿದ್ಯುತ್ ಯಂತ್ರಗಳನ್ನು ನಿಮಾರ್ಣ ಮಾಡುತ್ತಿದ್ದಾರೆ.
ಗಾಳಿ ವಿದ್ಯುತ್ ಯಂತ್ರಗಳನ್ನು ನಿಮಾರ್ಣ ಮಾಡುವುದಕ್ಕೆ ಬರಡು ಭೂಮಿಯಲ್ಲಿ ಮಾಡುವಂತೆ ಎರಡು ಗ್ರಾಮಗಳ ಮೂವತ್ತು ಕುಟುಂಬಗಳು ವಿದ್ಯುತ್ ಕಂಪನಿಗೆ ಹಲವಾರ ಬಾರಿ ಮನವಿಯನ್ನು ಮಾಡಿಕೊಂಡರು ಯಾವುದೇ ಪ್ರಯೋಜನೆಯಾಗಿಲ್ಲ, ಇದೇ ಭೂಮಿಯ ಮೇಲೆ ರೈತರು ತಮ್ಮ ಬದುಕು ಕಟ್ಟಿ ಕೊಂಡಿದ್ದಾರೆ. ಆದರೆ ಗಾಳಿ ಯಂತ್ರ ವಿದ್ಯುತ್ ಕಂಪನಿಯವರು ಅನಧಿಕೃತವಾಗಿ 15-16 ಅಡಿ ಅಗಲವಿರು ಕಂಬಗಳನ್ನು ಹಾಕಿ ಫಲವತ್ತಾದ ಭೂಮಿಯನ್ನು ಹಾಳು ಮಾಡುತ್ತಿದ್ದಾರೆ. ಇದಕ್ಕೆ ಸಂಭಂದಿಸಿದ ಅಧಿಕಾರಿಗಳು ಕೂಡಲೆ ಎಚ್ಚತುಕೊಂಡು ಬೇರೆ ಕಡೆ ಗಾಳಿ ವಿದ್ಯುತ್ ಕಂಬಗಳನ್ನು ನಿಮಾರ್ಣ ಮಾಡುವಂತೆ ಜಿಲ್ಲಾಡಳಿತದ ಮೂಲಕ ಪವನ್ ವಿದ್ಯುತ್ ಗಾಳಿ ಯಂತ್ರ ಕಂಪನಿಯ ಅಧಿಕಾರಿಗಳಿಗೆ ರೈತ ಸೇನೆ ಮನವಿ ಮಾಡಿಕೊಂಡರು. ಒಂದು ವೇಳೆ ಮನವಿಯ ಬಳಿಕವು ಅನಧಿಕೃತ ಕಂಬಗಳನ್ನು ನಿಮಾರ್ಣ ಮಾಡಿದಲ್ಲಿ ಉಗ್ರವಾಗಿ ಹೊರಾಟ ಮಾಡುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
