ಬೆಂಗಳೂರು: ಬೆಂಗಳೂರು ಬುಲ್ಸ್ ನಾಯಕ ಪವನ್ ಶೆರವತ್ ಭರ್ಜರಿ ಪ್ರದರ್ಶನ ಮುಂದುವರಿಸಿದ ಪರಿಣಾಮ ಹರ್ಯಾಣ ಸ್ಟೀಲರ್ಸ್ ವಿರುದ್ಧ 28-42 ಅಂಕಗಳಲ್ಲಿ ಜಯ ಸಾಧಿಸಿದೆ. ಕಳೆದ ಮೂರು ಪಂದ್ಯಗಳಿಂದ ದಾಳಿಯಲ್ಲಿ ಉತ್ತಮ ಲಯದಲ್ಲಿರುವ ಪವನ್ ಇಂದು ಕೂಡ ಬೆಂಗಳೂರು ಬುಲ್ಸ್ ಪರ ಉತ್ತಮ ಪ್ರದರ್ಶನ ನೀಡಿದರು. ಬೆಂಗಳೂರು ತಂಡಕ್ಕೆ 15 ರೈಡ್, 2 ಟೇಕಲ್, 5 ಬೋನಸ್ ಅಂಕ ಸಹಿತ,
22 ಅಂಕ ಗಳಿಸಿ ಬುಲ್ಸ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಜಯದೊಂದಿಗೆ ಬೆಂಗಳೂರು ಬುಲ್ಸ್ ಕೂಟದಲ್ಲಿ ಸತತ ಮೂರನೇ ಜಯ ಸಾಧಿಸಿತು. ಬೆಂಗಳೂರು ತಂಡ 20 ರೈಡ್, 18 ಟೇಕಲ್, 4 ಆಲ್‍ಔಟ್ ಪಾಯಿಂಟ್ ಸೇರಿ 42 ಅಂಕ ದಾಖಲಿಸಿತು. ಹರಿಯಾಣ ಸ್ಟೀಲರ್ಸ್ 19 ರೈಡ್, 9 ಟೇಕಲ್ ಸಹಿತ 28 ಅಂಕಗಳಿಸಿತು. ಇದರೊಂದಿಗೆ ಬೆಂಗಳೂರು ತಂಡ 14 ಅಂಕಗಳ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ 2 ಸ್ಥಾನಕ್ಕೆ ಏರಿದೆ.
