ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಜೈಲಿನಲ್ಲಿ ಕಾಲ ಕಳೆಯುತ್ತಿದೆ. ಇನ್ನೂ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬಂಧನಕ್ಕೊಳಗಾಗಿರುವ ಪವಿತ್ರಾ ಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಾಳೆ ಅವರ ಅರ್ಜಿಯ ವಿಚಾರಣೆ ಬರಲಿದೆ. ಸೆಬಾಸ್ಟಿಯನ್ ಎಂಬ ವಕೀಲರು ಪವಿತ್ರಾ ಗೌಡ ಪರವಾಗಿ ವಾದ ಮಂಡಿಸಲಿದ್ದಾರೆ.
ಹೌದು ಕೇಸ್ ನ ವಿಚಾರಣೆ ನಡೆಯುತ್ತಿರುವ ಬೆಂಗಳೂರಿನ ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನಿಗೆ ಅವರು ಅರ್ಜಿ ಸಲ್ಲಿಸಬಹುದು. ಆದರೆ, ಪವಿತ್ರಾ ಗೌಡ ಅವರು ಕೆಳ ಹಂತದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದಕ್ಕೂ ಮುನ್ನವೇ ಹೈಕೋರ್ಟ್ ಮೊರೆ ಹೋಗಿರುವುದು ಕುತೂಹಲ ತಂದಿದೆ.
Eye Twitching: ಎಡಗಣ್ಣು ಪಟಪಟ ಅಂತ ಹೊಡೆದುಕೊಳ್ತಿದ್ರೆ ಹೀಗೆಲ್ಲಾ ಆಗ್ಬೋದಂತೆ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಅವರು ಎ1 ಆರೋಪಿಯಾಗಿದ್ದಾರೆ. ಇತ್ತೀಚೆಗೆ ಸಲ್ಲಿಸಲಾಗಿರುವ ಚಾರ್ಚ್ ಶೀಟ್ ನಲ್ಲಿ ರೇಣುಕಾಸ್ವಾಮಿಯವರ ಕೊಲೆಗೆ ಮೂಲ ಕಾರಣವೇ ಇವರು ಎಂದು ಉಲ್ಲೇಖಿಸಲಾಗಿದ್ದು,
ಬೆಂಗಳೂರಿನ ಪಟ್ಟಣಗೆರೆಯ ಶೆಟ್ ನಲ್ಲಿ ರೇಣುಕಾಸ್ವಾಮಿಯವರ ಮೇಲೆ ದರ್ಶನ್ ಗ್ಯಾಂಗ್ ಹಲ್ಲೆ ನಡೆಸುವಾಗ ಕಿಲ್ ಹಿಮ್ ಎಂದು ನಟ ದರ್ಶನ್ ಗೆ ಹೇಳುವ ಮೂಲಕ ಗ್ಯಾಂಗಿನ ಸದಸ್ಯರಿಗೆ ಆತನನ್ನು ಕೊಲ್ಲಲು ಪ್ರೇರೇಪಣೆ ನೀಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಅವರನ್ನೇ ಎ1 ಆರೋಪಿ ಎಂದು ಘೋಷಿಸಲಾಗಿದೆ.