ಬೆಂಗಳೂರಿನ ಪ್ರತಿಷ್ಠಿತ ಪಬ್ ನಲ್ಲಿ ತಡರಾತ್ರಿವರೆಗೂ ಪಾರ್ಟಿ ಮಾಡಿದ್ದಾರೆ ಎನ್ನುವ ಆರೋಪ ಹೊತ್ತಿರುವ ನಟ ದರ್ಶನ್ (Darshan) ಮತ್ತು ಸ್ಯಾಂಡಲ್ ವುಡ್ ಕೆಲ ನಟರು ಇಂದು ಪೊಲೀಸ್ ವಿಚಾರಣೆಗಾಗಿ (Inquiry) ಸುಬ್ರಹ್ಮಣ್ಯ ಪೊಲೀಸ್ (Police) ಠಾಣೆಗೆ ಬರಲಿದ್ದಾರೆ. ಈಗಾಗಲೇ ದರ್ಶನ್ ಅಂಡ್ ಟೀಮ್ ಮನೆಯಿಂದ ಸ್ಟೇಶನ್ ನತ್ತ ಹೊರಟಿದೆ.
ಪಬ್ ವೊಂದರಲ್ಲಿ ತಡರಾತ್ರಿವರೆಗೂ ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಇತರ ನಟರಿಗೆ ಪೊಲೀಸರು ನೋಟಿಸ್ ನೀಡಿದ್ದರು. ದುಬೈ ಪ್ರವಾಸದ ನಿಮಿತ್ತ ವಿಚಾರಣೆಗೆ ದರ್ಶನ್ ಹಾಜರಾಗಿರಲಿಲ್ಲ. ಪಾರ್ಟಿಯಲ್ಲಿ ಭಾಗವಹಿಸಿದ ಚಿತ್ರತಂಡ ಹಾಗೂ ಇತರ ನಟರು ವಿಚಾರಣೆಗಾಗಿ ಇಂದು ಸ್ಟೇಶನ್ ಗೆ ಬರುತ್ತಿದ್ದಾರೆ.