ವಿಜಯಪುರ: ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ದ ವಿಜಯಪುರದ ಪರಿಶ್ರಮ ಮಹಿಳಾ ಸಾಂತ್ವನ ಸಂಸ್ಥೆ ಅಧ್ಯಕ್ಷೆ ವಿದ್ಯಾ ಪಾಟೀಲ್ ಎಂಬುವವರು ನಾಲಿಗೆ ಹರಿ ಬಿಟ್ಟಿದ್ದಾರೆ. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ವಿದ್ಯಾ ಪಾಟೀಲ್, ಪಂಚಮಸಾಲಿ ಶ್ರೀಗಳಿಗೆ ಕಾವಿ ಬಿಚ್ಚಿ ಚಪ್ಪಲಿ ಸೇವೆ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಲುಬಿಚ್ಚಿದ್ದ ಕತ್ತೆಯೆಂದು ಸ್ವಾಮೀಜಿಗೆ ಜರಿದ ಮಹಿಳೆ, ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ರಾಜಕೀಯ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ತಾವು ಬಸವಣ್ಣನವರ ಹೆಸರಿನಲ್ಲಿ ಕಾವಿ ಧರಿಸಿದನ್ನು ಮರೆತಿದ್ದಾರೆ. ಬಸವಣ್ಣನ ಹೆಸರಿನಲ್ಲಿ ರಾಜಕೀಯ ಮಾಡುವುದಕ್ಕೆ ನಿಮಗೆ ಯಾವ ಅರ್ಹತೆ ಇಲ್ಲ. ಬಸವಣ್ಣನವರಿಗೆ ಯಾವುದೇ ಜಾತಿ ಇಲ್ಲ, ನಿಮಗೆ ಜಾತಿ ಬಗ್ಗೆ ಸರ್ಕಾರದ ಜೊತೆ ಹೋರಾಟ ಮಾಡಬೇಕಿದ್ದರೆ ಕಾವಿ ಬಿಚ್ಚಿಟ್ಟು ಮಾಡಿ ಎಂದು ಗುಡುಗಿದ್ದಾರೆ.
ಈ ಕುರಿತು ರಾಜ್ಯದ ಇತರೆ ಸ್ವಾಮೀಜಿಗಳ ಜೊತೆಗೆ ಮಾತನಾಡಿದ್ದಾಗಿಯೂ ಹೇಳಿದ್ದಾರೆ. ಇನ್ನು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ಮಾಡುವುದಾದರೆ, ಕೂಡಲ ಸಂಗಮವನ್ನು ಖಾಲಿ ಮಾಡಬೇಕೆಂದು ಒತಾಯಿಸದ ಮಹಿಳೆ, ಬಸವಣ್ಣನ ಐಕ್ಯ ಸ್ಥಳದಲ್ಲಿದ್ದ ನೀವು, ಮಾಡುತ್ತಿರುವುದನ್ನು ಜನರಿಗೆ ತಿಳಿಸಬೇಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.