ಇಸ್ಲಾಮಾಬಾದ್: ಇಸ್ರೇಲ್ ಜತೆಗಿನ ಕದನದಲ್ಲಿ ತಮಗೆ ಸಹಾಯ ಮಾಡುವಂತೆ ಹಿರಿಯ ಹಮಾಸ್ ನಾಯಕ ಮತ್ತು ಹಮಾಸ್ ಸಂಘಟನೆಯ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಮನವಿ ಮಾಡಿದ್ದಾನೆ ಎಂದು ವರದಿಯಾಗಿದೆ. ಪಾಕಿಸ್ತಾನವನ್ನು ‘ಧೈರ್ಯಶಾಲಿ’ ಎಂದು ಶ್ಲಾಘಿಸಿರುವ ಹನಿಯೆ, “ಇಸ್ರೇಲ್ಗೆ ಪಾಕಿಸ್ತಾನದಿಂದ ಪ್ರತಿರೋಧ ಎದುರಾದರೆ, ಅದು ಎಸಗುತ್ತಿರುವ ಕ್ರೌರ್ಯದ ಮಟ್ಟ ತಗ್ಗಬಹುದು” ಎಂದು ಹೇಳಿಕೆ ನೀಡಿರುವುದಾಗಿ ವರದಿ ಮಾಡಿದೆ. ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ‘ಅಲ್ ಅಕ್ಸಾ ಮಸೀದಿಯ ಪಾವಿತ್ರ್ಯತೆ ಮತ್ತು ಮುಸ್ಲಿಂ ಉಮ್ಮಾ ಜವಾಬ್ದಾರಿಗಳು,
Winter Health: ಚಳಿಗಾಲದಲ್ಲಿ ವಸಡು ಮತ್ತು ಹಲ್ಲುಗಳ ಆರೈಕೆ ಹೇಗೆ ಗೊತ್ತಾ: ಇಲ್ಲಿದೆ ಟಿಪ್ಸ್!
‘ ಕುರಿತಾದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಹನಿಯೆ, ಈ ಹೇಳಿಕೆ ನೀಡಿದ್ದಾನೆ. ಹಮಾಸ್ಗೆ ಪಾಕಿಸ್ತಾನದ ಬೆಂಬಲ ಸಿಗಲಿದೆ ಎಂಬ ಭರವಸೆ ವ್ಯಕ್ತಪಡಿಸಿರುವ ಆತ, ಪಾಕಿಸ್ತಾನವು ‘ಮುಜಾಹಿದ್ದೀನ್ಗಳ ಭೂಮಿ’ (ಇಸ್ಲಾಂಗಾಗಿ ಹೋರಾಡುವ ಜನರು) ಎಂದು ಬಣ್ಣಿಸಿದ್ದಾನೆ. ಪ್ರಸ್ತುತ ನಡೆಯುತ್ತಿರುವ ಹಮಾಸ್- ಇಸ್ರೇಲ್ ಯುದ್ಧದಲ್ಲಿ ಪ್ಯಾಲೆಸ್ತೀನ್ ಜನತೆ ಮಾಡಿರುವ ತ್ಯಾಗಗಳನ್ನು ಒತ್ತಿ ಹೇಳಿರುವ ಹನಿಯೆ, ಪಾಕಿಸ್ತಾನವು ತನ್ನ ಬಲ ಪ್ರದರ್ಶಿಸಿ ಸಂಘರ್ಷವನ್ನು ನಿಲ್ಲಿಸುವಷ್ಟು ಶಕ್ತವಾಗಿದೆ ಎಂದು ಹೇಳಿರುವುದಾಗಿ ತಿಳಿಸಿದೆ.