ಬೆಂಗಳೂರು: ಬೆಂಗಳೂರಿನಲ್ಲಿ ತಾಯಿ ಮತ್ತು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. ಬೆಂಗಳೂರಿನ ಯಲಹಂಕದ ಆರ್.ಎನ್.ಝೆಡ್ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದೆ. ಮೃತರನ್ನು ಪುಲಿವರ್ತ (13) ವರ್ಷ ಹಾಗೂ ರಮ್ಯಾಜಿ (40) ಎಂದು ಗುರುತಿಸಲಾಗಿದೆ.
ಮನೆಯ ಫ್ಯಾನಿಗೆ ಸೀರೆಯನ್ನು ಬಿಗಿದು ಮೊದಲು 13 ವರ್ಷದ ಮಗನನ್ನು ನೇಣಿನ ಕುಣಿಕೆಗೆ ಹಾಕಿ ಕೊಲೆ ಮಾಡಿದ್ದಾಳೆ. ಮಗ ಸತ್ತ ನಂತರ ಆತನ ಹೆಣವನ್ನು ಕೆಳಗಿಳಿಸಿ, ನಂತರ ತಾನು ಅದೇ ನೇಣಿನ ಕುಣಿಕೆಗೆ ಕೊರಳೊಡ್ಡಿ ಜೀವ ಬಿಟ್ಟಿದ್ದಾಳೆ. ಈ ಘಟನೆಯ ಬಗ್ಗೆ ನೋಡುಗರು ಹಾಗೂ ಕೇಳುಗರಿಗೆ ಕರುಳು ಕಿವುಚುವಂತಹ ವಾತಾವರಣ ನಿರ್ಮಿಸಿದೆ.
Vaastu Tips: ಮನೆಯೊಳಗೆ ಪೊರಕೆಯನ್ನು ಹೀಗೆ ಇಟ್ಟರೆ ಲಕ್ಷ್ಮಿ ಕೃಪೆ ಸಿಗುತ್ತಂತೆ!
ಕಳೆದ ತಿಂಗಳ ಹಿಂದೆ ಗಂಡ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದಾರೆ. ಶ್ರೀಧರ್ ಸಾವಿನಿಂದಾಗಿ ಇಡೀ ಕುಟುಂಬ ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಫ್ಲ್ಯಾಟ್ ಬಾಡಿಗೆ 45 ಸಾವಿರ, ಮಕ್ಕಳ ಶಾಲೆ, ಕಾಲೇಜು ಹಾಗೂ ಪಿಜಿ ಫೀಸ್, ಮನೆ ನಿರ್ವಹಣೆ ಖರ್ಚು ಅಂತ ತಿಂಗಳಿಗೆ ಲಕ್ಷ ಲಕ್ಷ ಹಣ ಬೇಕಿತ್ತು. ಆದರೆ, ರಮ್ಯಾಳಿಗೆ ಹಣ ಹೊಂದಿಸೋದು ಸಾಧ್ಯವಾಗದೇ ಜೀವನ ನಡೆಸಲು ತೀವ್ರ ಸಮಸ್ಯೆ ಉಂಟಾಗಿದೆ.
ಇದರ ಬೆನ್ನಲ್ಲಿಯೇ ಸಂಕಷ್ಟಕ್ಕೆ ಸಿಲುಕಿದ್ದ ರಮ್ಯಾ ನಾವು ಕುಟುಂಬ ಸಮೇತವಾಗಿ ಸತ್ತು ಹೋಗುವುದೊಂದೇ ದಾರಿ ಎಂದು ಅಳಲು ತೋಡಿಕೊಂಡಿದ್ದರಂತೆ. ಈಗ ಅದೇ ರೀತಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ. ಸಾಯುವ ಮುನ್ನ ಡೆತ್ನೋಟ್ ಬರೆದಿದ್ದು, ಪೊಲೀಸರು, ವೈದ್ಯರು ಹಾಗೂ ಮಗಳಿಗೆ ಕೆಲವೊಂದು ವಿಚಾರಗಳನ್ನು ಬರೆದಿಟ್ಟಿದ್ದಾರೆ. ಈ ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ. ನಂತರ, ಮೃತದೇಹಗಳು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.