ಶಿವಮೊಗ್ಗ:- ನಮ್ಮ ರಾಮ ಬೇರೆಯೇ ಇದ್ದಾನೆ, ಜೋಪಾನ ಮಾಡ್ತಾನೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಆಹ್ವಾನಿಸಿಲ್ಲ. ಇನ್ನು ನಮ್ಮನ್ನು ಲೆಕ್ಕಕ್ಕೆ ಇಡುತ್ತಾರಾ? ರಾಮ ನಮ್ಮನ್ನು ಲೆಕ್ಕಕ್ಕೆ ಇಡುತ್ತಾನೆ. ಜನವರಿ 22 ರಂದು ಶ್ರೀರಾಮನಿಗೆ ಇಲ್ಲಿಂದಲೇ ದೊಡ್ಡ ಸಮಸ್ಕಾರ ಮಾಡುತ್ತೇವೆ ಎಂದರು.
ನಮ್ಮೂರಲ್ಲಿ ರಾಮನ ದೇವಸ್ಥಾನ ಇದೆ, ಇದಕ್ಕೆ ಬಹಳ ಕನೆಕ್ಟ್ ಇದೆ. ಅನುಮತಿ ಪಡೆದು ಹೋಗಬೇಕು ಅಂತಾ ತೀರ್ಮಾನ ಮಾಡಿದ್ದೇವೆ. ಕನೆಕ್ಟ್ ಆದ ಮೇಲೆ ಅನುಮತಿ ಪಡೆದು ಹೋಗಬೇಕೆಂದು ತೀರ್ಮಾನಿಸಿದ್ದೇವೆ. ಅದು ಯಾವಾಗ ಕರೆಸಿಕೊಳುತ್ತಾನೋ ನೋಡೋಣ, ಒಟ್ಟಾರೆ ಕರೆಸಿಕೊಳ್ಳುತ್ತಾನೆ ಎಂದರು.
ಸಂಸದ ಅನಂತ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವರು, ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಬಿಜೆಪಿಯವರು ಹಂತ ಹಂತವಾಗಿ ನಿರ್ನಾಮವಾಗಿ ಹೋಗುತ್ತಿದ್ದಾರೆ. ಇಂತಹ ಹೇಳಿಕೆಗಳಿಂದಲೇ 67 ಸ್ಥಾನಗಳಿಗೆ ಇಳಿದಿದ್ದಾರೆ. ದೇವರು ಹಸರಿನಲ್ಲಿ ನಮಗೆ ಶಾಪ ಕೊಡುತ್ತಾರೆ. ದೇವರು ಕೆಲವೊಮ್ಮೆ ನಮಗೆ ರಿವರ್ಸ್ ಹೊಡೆದು ಬಿಡುತ್ತಾನೆ. ಒಳ್ಳೆಯವರು ಯಾರು, ನಮ್ಮನ್ನು ಯಾರು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂದು ದೇವರಿಗೆ ಚನ್ನಾಗಿ ಗೊತ್ತು ಎಂದರು.